ರಾಮನಗರ, ಜ 16 (Daijiworld News/MB) : ಭಾರತದ ಸಂಸ್ಕೃತಿ, ಇತಿಹಾಸದ ಬಗ್ಗೆ ಭಾಷಣ ಮಾಡುವವರ ಮಕ್ಕಳು ಟ್ರಂಪ್ನ ಹತ್ತಿರ ಹೋಗಿ ಕೈ ಒಡ್ಡಿ ಅಮೆರಿಕಾದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ ಹಾರ್ಟ್ ಅಟಾಕ್ ಆದ ಸಂದರ್ಭದಲ್ಲಿ ಫಾದರ್ ಮುಲ್ಲಾರ್ ಆಸ್ಪತ್ರೆಗೆ ದಾಖಲು ಆಗುತ್ತಾರೆ, ಆಗ ಯಾವ ಜಾತಿ ಧರ್ಮ ನೆನೆಪಾಗಲ್ಲ. ಬಾಯಿಗೆ ಬಂದಾಗ ಹಾಗೆ ಮಾತಾನಾಡ್ತಾರೆ. ಹಿರಿಯರು ಎಂಬ ಕಾರಣಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಮೇಲೆ ನನಗೆ ಗೌರವವಿದೆ ಎಂದು ಸಂಸದ ಡಿಕೆ ಸುರೇಶ್ ಕಿಡಿಕಾರಿದ್ದಾರೆ.
ಕನಕಪುರಕ್ಕೆ ಬಂದು ಬೊಗಳಿಸಿದ್ದೀರಿ ಹೋಗಿದ್ದೀರಿ, ಬೊಗಳುವ ನಾಯಿ ಕಚ್ಚುತ್ತಾ? ಎಂಬ ಗಾದೆಯಿದೆ. ನಾಳಿಗೆಗೆ ಮೂಳೆಯಿಲ್ಲ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು. ಗಾಂಧೀಜಿ ಶಾಂತಿ ತತ್ವ ಹೇಳಿದರು. ಅಂಬೇಡ್ಕರ್ ಸಮಾನತೆ ಸಾರಿದರು. ಬಸವಣ್ಣ ಮನುಷ್ಯ ಧರ್ಮ ಎಂದು ಹೇಳಿದರು. ಇವರ ಬಗ್ಗೆ ಬಂದು ಮಾತನಾಡುತ್ತಾರೆ. ಆದರೆ ಗಾಂಧೀಜಿಯ ತತ್ವವಿಲ್ಲ, ಬಸವಣ್ಣನ ಆದರ್ಶವಿಲ್ಲ, ಅಂಬೇಡ್ಕರ್ ಅವರನ್ನು ಗೌರವಿಸಲ್ಲ. ಅಂತವರು ಬಂದು ನಮಗೆ ಹಿತವಚನ ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದರು.
ನಮ್ಮ ಹಳ್ಳಿಯಲ್ಲಿ ವಯಸ್ಸು ಆದವರಿಗೆ ಅರಳು ಮರಳು ಎಂದು ಹೇಳುತ್ತಾರೆ, ಹಾಗೆ ಅರಳು ಮರಳು ಆಗಿರುವ ಕಾಲದಲ್ಲಿ ತಲೆಕಟ್ಟಿರುವವರ ಜಾಗದಲ್ಲಿ ಇರಬೇಕು. ಅಂಥವರು ಬಂದು ಕನಕಪುರದಲ್ಲಿ ಭಾಷಣ ಮಾಡಿ ಹೋಗಿದ್ದಾರೆ. ಅವರ ಮಕ್ಕಳು ಮಾತ್ರ ಕ್ರೈಸ್ತರ ದೇಶದಲ್ಲಿ ಕೈಒಡ್ಡಿ ಕೆಲಸ ಮಾಡುತ್ತಾರೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಾನು ಹಾಗೂ ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ನಮ್ಮ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಒಬ್ಬನೇ ಹಿಂದುವನ್ನು ಮತಾಂತರ ಮಾಡಿದ್ದರೆ ತೋರಿಸಲಿ, ಹಾಗದಲ್ಲಿ ಅದಕ್ಕೆ ತಕ್ಕುದಾದ ರಾಜಕೀಯ ಸನ್ಮಾನ ನಾನು ಸ್ವೀಕರಿಸುತ್ತೇನೆ ಎಂದು ಸವಾಲು ಹಾಕಿದರು.