ಕೊಚ್ಚಿ, ಜ 16 (Daijiworld News/MB) : ಲವ್ ಜಿಹಾದ್ ಒಂದು ವಾಸ್ತವ ಮತ್ತು ಸತ್ಯವಾದದ್ದು ಎಂದು ಕ್ಯಾಥೋಲಿಕ್ ಬಿಷನ್ಗಳ ಒಕ್ಕೂಟ ಸೈರೋ- ಮಲಬಾರ್ ಚರ್ಚ್ ಪ್ರತಿಪಾದಿಸಿದೆ.
ಹಿಂದೂ ಸಂಘಟನೆಗಳು ಲವ್ ಜಿಹಾದ್ ನಡೆಯುತ್ತಿದೆ ಎಂದು ಹೇಳುತ್ತಿದ್ದು ಕ್ಯಾಥೋಲಿಕ್ ಬಿಷನ್ಗಳ ಒಕ್ಕೂಟ ಸೈರೋ- ಮಲಬಾರ್ ಚರ್ಚ್ನ ಈ ಪ್ರತಿಪಾದನೆಯನ್ನು ಸ್ವಾಗತಿಸಿದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತಿರಸ್ಕಾರ ಮಾಡಿದೆ.
ಕ್ಯಾಥೋಲಿಕ್ ಬಿಷನ್ಗಳ ಒಕ್ಕೂಟ ಸಿಂಡೋ ಆಫ್ ಸೈರೋ-ಮಲಬಾರ್ ಚರ್ಚ್ ಕಾರ್ಡಿನಲ್ ಜಾರ್ಜ್ ಅಲಂಚೇರಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಕ್ಯಾಥೋಲಿಕ್ ಸಮುದಾಯದ ಯುವತಿಯರನ್ನು ಉಗ್ರ ಸಂಘಟನೆ ಐಸಿಸ್ಗೆ ಸೇರುವಂತೆ ಮಾಡುವ ಜಾಲ ಹೆಚ್ಚಾಗುತ್ತಲ್ಲೇ ಇದೆ. ಈ ರೀತಿ ಕ್ಯಾಥೋಲಿಕ್ ಸಮುದಾಯದ ಯುವತಿಯರನ್ನು ಉಗ್ರ ಸಂಘಟನೆಗೆ ಸೇರಿಸಿ ಉಗ್ರರಿಗೆ ನೆರವು ನೀಡಲಾಗುತ್ತದೆ. ಕೇರಳ ಪೊಲೀಸ್ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪ ಮಾಡಿದೆ.
ಕೇರಳದಲ್ಲಿ ಲವ್ ಜಿಹಾದ್ನಿಂದಾಗಿ ಕ್ರೈಸ್ತ ಯುವತಿಯರನ್ನು ಹತ್ಯೆ ಮಾಡಲಾಗಿದೆ. ಲವ್ ಜಿಹಾದ್ನ ಪರಿಣಾಮದಿಂದಾಗಿ ಕೇರಳದಲ್ಲಿ ವಿವಿಧ ವರ್ಗಗಳ ನಡುವೆ ಮನಸ್ತಾಪ ಹೆಚ್ಚಾಗಲು ಕಾರಣವಾಗುತ್ತದೆ. ಇದು ಕೇರಳದಲ್ಲಿ ನಡೆಯುತ್ತಿದೆ ಎನ್ನುವ ವಿಷಯ ಕಲ್ಪನೆಯಲ್ಲ ಅದು ವಾಸ್ತವ ಸತ್ಯ. ಕ್ರೈಸ್ತ ಸಮುದಾಯದ ಯುವತಿಯರನ್ನು ಮೋಸ ಮಾಡಿ ಅವರನ್ನು ಸೆಳೆಯುವ ದೊಡ್ಡ ಜಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರೋಪಿಸಿದೆ.
ಈ ಆರೋಪವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಅಲ್ಲಗಳೆದಿದ್ದು, "ಇದೊಂದು ಆಧಾರವಿಲ್ಲದ ಆರೋಪವಾಗಿದೆ. ಈ ಆರೋಪ ಮಾಡಿರುವ ಸಮಯ ಕೂಡಾ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ" ಎಂದು ಹೇಳಿದೆ.
ವಿಶ್ವ ಹಿಂದೂ ಪರಿಷತ್ ಚರ್ಚ್ನ ಈ ಪ್ರತಿಪಾದನೆಯನ್ನು ಸ್ವಾಗತ ಮಾಡಿದ್ದು, ಲವ್ ಜಿಹಾದ್ ವಿರುದ್ಧ ಒಗ್ಗಟ್ಟಿನಲ್ಲಿ ಹೋರಾಟಕ್ಕೆ ಕೈಜೋಡಿಸುವಂತೆ ಹೇಳಿದೆ. ವಿಎಚ್ಪಿಯ ಕೇರಳ ಘಟಕದ ಮಾಜಿ ಅಧ್ಯಕ್ಷ ಎಸ್ಜೆಆರ್ ಸುಮಾರ್ ಅವರು ಮಾತಾನಾಡಿ, "ಲವ್ ಜಿಹಾದ್ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಈ ಮೊದಲು ನಾವು ಹೇಳಿದಾಗ ಯಾರೂ ಕೂಡಾ ಕೇಳಿಸಲಿಲ್ಲ. ಈಗಲಾದರೂ ಈ ಬಗ್ಗೆ ಚರ್ಚ್ ನಿಲುವು ತಾಳಿರುವುದು ಸರಿಯಾಗಿದೆ" ಎಂದು ಹೇಳಿದ್ದಾರೆ.