ತಿರುವನಂತಪುರ, ಜ.16 (Daijiworld News/PY) : "ತಮ್ಮ ಅಂಗೀಕಾರ ಪಡೆಯದೆಯೇ ಪೌರತ್ವ ಕಾಯ್ದೆಯ ವಿರುದ್ದ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ" ಎಂದು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಹೇಳಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ಕೇರಳ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥನಾಗಿರುವುದರಿಂದ ರಾಜ್ಯ ಸರ್ಕಾರ ಮೊದಲು ನನಗೆ ಮಾಹಿತಿ ನೀಡಬೇಕಿತ್ತು. ಆದರೆ ನನ್ನ ಅನುಮತಿ ಇಲ್ಲದೆಯೇ ಕಾಯ್ದೆ ವಿರುದ್ದ ಸುಪ್ರೀಂ ಮೆಟ್ಟಿಲೇರಿದ್ದಾರೆ. ಎಲ್ಲದಕ್ಕೂ ಕಾನೂನಿನ ಗಡಿಯಿರುತ್ತದೆ. ನಾನು ಅಥವಾ ಯಾರೇ ಆಗಲಿ ಕಾನೂನಿಗಿಂತ ದೊಡ್ಡವರಲ್ಲ. ನಾನು ನ್ಯಾಯಾಂಗದ ವಿರುದ್ದ ಹೋಗುವುದಿಲ್ಲ" ಎಂದು ತಿಳಿಸಿದ್ದಾರೆ.
"ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳು ಮೊದಲು ನಾನು ನನ್ನ ಚಿಂತನೆ ಹಾಗೂ ಬುದ್ದಿಯನ್ನು ಉಪಯೋಗಿಸುತ್ತೇನೆ. ಯಾವುದಕ್ಕೂ ಅನುಮತಿ ನೀಡುವ ಮೊದಲು ನನಗೆ ಚಿಂತನೆ ನಡೆಸುವ ಕಾಲಾವಕಾಶದ ಅಗತ್ಯವಿದೆ. ತಕ್ಷಣವೇ ಅಧಿವೇಶನ ನಡೆಸುವ ಅಗತ್ಯ ಏನಿತ್ತು. ಈ ವಿಚಾರವಾಗಿ ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ಬೇಕಿದೆ. ನಂತರ ನಾನು ಅಂತಿಮ ನಿರ್ಧಾರವನ್ನು ಕೈಗೊಳ್ಳುತ್ತೇನೆ" ಎಂದು ಹೇಳಿದ್ದಾರೆ.