ಶ್ರೀನಗರ, ಜ 16 (DaijiworldNews/SM): ದೇಶದಲ್ಲಿ ಗಣರಾಜೋತ್ಸವ ಸಂಭ್ರಮಕ್ಕೆ ಇನ್ನೇನು ಕೆಲವು ದಿನಗಳು ಬಾಕಿ ಉಳಿದಿವೆ. ಈ ನಡುವೆ ದೇಶದ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಲಾಗಿದೆ. ಜೈಷ್-ಇ- ಮೊಹಮ್ಮದ್ ಸಂಘಟನೆಗೆ ಸೇರಿದ ಐವರು ಸಂಚುಕೋರರನ್ನು ಬಂಧಿಸಲಾಗಿದೆ.
ಗಣರಾಜ್ಯೋತ್ಸವ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಹಜಾರತ್ ಬಾಲ್ ಪ್ರದೇಶದಲ್ಲಿ ಎರಡು ಗ್ರೆನೇಡ್ ಸ್ಫೋಟವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಹಾಗೂ ಉಗ್ರ ಚಟುವಟಿಕೆ ಮಟ್ಟ ಹಾಕಲು ಕ್ರಮಕೈಗೊಂಡಿದ್ದಾರೆ. ಅಲ್ಲದೆ ಸಂಚು ಪೂಪಿಸಿದ್ದ ಸುಮಾರು ಐವರನ್ನು ಬಂಧಿಸಲಾಗಿದೆ.
ಸಂಚುಕೋರರನ್ನು ಸದರ್ಬಲ್ ಹಜರತ್ಬಾಲ್ನ ಐಜಾಜ್ ಅಹ್ಮದ್ ಶೇಖ್, ಹಜಾರತ್ ಬಾಲ್ ಅಸಾರ್ ಕಾಲೋನಿಯ ಉಮರ್ ಹಮೀದ್ ಶೇಖ್, ಇಮ್ತಿಯಾಜ್ ಅಹ್ಮದ್, ಎಲ್ಲಹಿಬಾಗ್ ಸೌರಾದ ಶಹೀಲ್ ಫಾರೂಖ್ ಗೊಜ್ರಿ ಮತ್ತು ಸದರ್ ಬಲ್ ಹಜಾರತ್ ಬಾಲ್ ನ ನಸೀರ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದೆ.
ಸಂಚುಕೋರರಿಂದ ಗೆಲಾಟಿನ್ ಕಡ್ಡಿಗಳು, ದ್ವಿತೀಯ ಸ್ಫೋಟಕಗಳು, ಸೈಲೆನ್ಸರ್ಸ್, ಡಿಟೊನೆಟರ್ಸ್, ವಾಕಿ ಟಾಕಿ, ಸಿಡಿ ಡ್ರೈವ್, ಬ್ಯಾಟರಿಗಳು, ಬ್ಯಾಟರಿ ಚಾರ್ಜರ್ ಸೇರಿದಂತೆ ಕೆಲವು ಸ್ಪೋಟಕ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.