ಮಡಿಕೇರಿ, ಜ 17 (Daijiworld News/ MB) : ಸ್ಯಾಂಡಲ್ವುಡ್ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟಿ, ರಶ್ಮಿಕಾ ಮಂದಣ್ಣ ಮನೆಗೆ ಗುರುವಾರ ಐಟಿ ದಾಳಿ ನಡೆದಿದ್ದು ಇಂದೂ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ರಶ್ಮಿಕಾ ಹಾಗೂ ಅವರ ತಂದೆ ಮದನ್ ಮಂದಣ್ಣ ಅವರಿಗೆ ಹೊರಹೊಗದಂತೆ ಸೂಚನೆ ನೀಡಲಾಗಿದ್ದು ಈ ಹಿನ್ನಲೆಯಲ್ಲಿ ಅವರನ್ನು ಇಂದೂ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಶೂಟಿಂಗ್ನಲ್ಲಿ ಇದ್ದ ನಟಿ ಸಮನ್ಸ್ ಹಿನ್ನೆಲೆಯಲ್ಲಿ ಹೈದರಾಬಾದ್ನಿಂದ ರಾತ್ರಿ 9.30ಕ್ಕೆ ನೇರವಾಗಿ ಮನೆಗೆ ಬಂದು ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದರು. ಈ ಸಂದರ್ಭದಲ್ಲಿ ನಟಿ ಮಾಡುವ ಹೂಡಿಕೆ ಹಾಗೂ ಸಂಭಾವನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬಳಿಕ ಸುಮಾರು 2.30 ಗಂಟೆಗೆ ಅಧಿಕಾರಿಗಳು ವಿರಾಜಪೇಟೆಯ ಸೆರೆನಿಟಿ ಹಾಲ್ಗೆ ತೆರಳಿದ್ದು ಅಲ್ಲೇ ವಾಸ್ತವ್ಯ ಮಾಡಿದರು, ಹಾಗೆಯೇ ರಶ್ಮಿಕಾ ಹಾಗೂ ಮಂದಣ್ಣ ಅವರಿಗೆ ಹೊರಹೋಗದಂತೆ ಸೂಚನೆ ನೀಡಿದ್ದಾರೆ.