ಕಾರವಾರ, ಜ 17 (Daijiworld News/MSP): ರಾಜಧಾನಿ ದೆಹಲಿಯಲ್ಲಿ ಜ.26ರ ಗಣರಾಜ್ಯೋತ್ಸವದ ದಿನದಂದು ವಿದ್ವಾಂಸಕ ಕೃತ್ಯ ನಡೆಸಿ, ರಕ್ತಪಾತಕ್ಕಾಗಿ ಸಂಚು ರೂಪಿಸಿದ್ದ ಉಗ್ರರ ತಂಡದಲ್ಲಿ ಭಟ್ಕಳದ ವ್ಯಕ್ತಿಯೂ ಗುರುತಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈಗಾಗಲೇ ವಿದ್ವಾಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಉಗ್ರರ ರೇಖಾ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು,ಈ ತಂಡದಲ್ಲಿ 9 ಮಂದಿ ಉಗ್ರರಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿದ್ದು, ಪ್ರಸ್ತುತ ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ರೇಖಾಚಿತ್ರವೆಂದು ಹೇಳಲಾಗುತ್ತಿರುವ ಉಗ್ರರ ಚಿತ್ರಗಳಲ್ಲಿ ಭಟ್ಕಳ ಮೂಲದ ವ್ಯಕ್ತಿಯೂ ಇದ್ದಾನೆಂದು ಎಂದು ಹೇಳಾಗುತ್ತಿದೆ. ಈತನನ್ನು ಆಫಿಫ್ ಜಿಲಾನಿ (41) ಎಂದು ಗುರುತಿಸಲಾಗಿದ್ದು, ಈತ ತನ್ನ ಕುಟುಂಬದೊಂದಿಗೆ ಸೌದಿ ಅರೇಬಿಯದಲ್ಲಿ ವಾಸವಿದ್ದನೆಂದು ತಿಳಿದುಬಂದಿದೆ.
ಸೌದಿ ಅರೇಬಿಯಾದ ನಂತರ ಆಫಿಫ್ ಜಿಲಾನಿ ಸಿರಿಯಾದತ್ತ ಪ್ರಯಾಣಿಸಿದ್ದ. ಆದರೆ ಅಲ್ಲಿ ಇಸಿಸ್ ಉಗ್ರ ಸಂಘಟನೆಗೆ ಸೇರದೆ ಕರಾಚಿಯಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡು ಉಗ್ರ ತರಭೇತಿ ಪಡೆದಿದ್ದಾನೆ ಎಂದು ತಿಳಿದುಬಂದಿದೆ.
ಆದರೆ ಈ ಬಗ್ಗೆ ಪೊಲೀಸ್ ಇಲಾಖೆ ಯಾವುದೇ ಮಾಹಿತಿ ಧೃಡಪಡಿಸಿಲ್ಲ. ಗಣರಾಜ್ಯೋತ್ಸವದಂದು ವಿದ್ವಾಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಮಾಹಿತಿ ಸ್ಪೋಟಗೊಳ್ಳುತ್ತಿದ್ದಂತೆ ತಲೆಮರೆಸಿಕೊಂಡಿರುವ ಆಫೀಫ್’ಗಾಗಿ ಮಂಗಳೂರು ಪೊಲೀಸರು ತಲಾಶ್ ಆರಂಭಿಸಿದ್ದು ಇಲ್ಲಿಯವರೆಗೆ 6 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎನ್ನಲಾಗುತ್ತಿದೆ,