ತ್ರಿಶೂರ್, ಜ 17 (Daijiworld News/ MB) : ಮೋದಿ ಭಾರತದ ಪ್ರಜೆ ಹೌದೆ ಅಲ್ಲವೆ ಎಂದು ತಿಳಿಯುವ ಸಲುವಾಗಿ ಸೂಕ್ತ ಪೌರತ್ವ ದಾಖಲೆಗಳನ್ನು ನೀಡುವಂತೆ ಕೋರಿ ಮಾಹಿತಿ ಹಕ್ಕು ಅರ್ಜಿಯನ್ನು ಕೇರಳ ಮಾಹಿತಿ ಇಲಾಖೆಗೆ ಸಲ್ಲಿಸಲಾಗಿದೆ.
ಈ ಅರ್ಜಿಯನ್ನು ಜನವರಿ 13 ರಂದು ಕೇರಳದ ತ್ರಿಶೂರ್ ಜಿಲ್ಲೆಯ ಚಳಕ್ಕುಡಿ ಪಟ್ಟಣದ ಜೋಶ್ ಕಲ್ಲುವೀಟ್ಟಿಳ್ ಎಂಬವರು ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಪ್ರಜೆ ಎಂದು ಸಾಬೀತು ಮಾಡುವ ದಾಖಲೆಗಳನ್ನು ಒದಗಿಸುವಂತೆ ಕೋರಿ ಅರ್ಜಿಯನ್ನು ಚಳಕ್ಕುಡಿ ಪುರಸಭೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸಲ್ಲಿಸಲಾಗಿದೆ.