ನವದೆಹಲಿ, ಜ.17 (Daijiworld News/PY) : ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಓರ್ವನಾದ ವಿನಯ್ ಎಂಬಾತ ತಿಹಾರ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ತಿಹಾರ್ ಜೈಲಿನಲ್ಲಿ ಬಿಗಿ ಭದ್ರತೆಯ ಕಣ್ಗಾವಲಿದ್ದರೂ ಅಪರಾಧಿ ವಿನಯ್ ಆತ್ಮಹತ್ಯೆ ಮಾಡಲು ಯತ್ನಿಸಿದ್ದಾನೆ ಎನ್ನಲಾಗುತ್ತಿದ್ದರೂ, ಆತನನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.
ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ಶಿಕ್ಷಗೊಳಗಾದ ವಿನಯ್ ಶರ್ಮಾ ಮರಣದಂಡನೆ ಶಿಕ್ಷೆ ವಿಧಿಸಿದ್ದ ಕಾರಣದಿಂದಾಗಿ ತುಂಬಾ ಚಡಪಡಿಸುತ್ತಿದ್ದು, ಆತ ನಿದ್ರೆ ಕೂಡಾ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅಪರಾಧಿಯ ಈ ಪರಿಸ್ಥಿತಿಯನ್ನು ನೋಡಿ ಜೈಲಿನ ಅಧಿಕಾರಿಗಳು ವಿನಯ್ಗೆ ಸಲಹೆ ನೀಡುತ್ತಿದ್ದರು ಎನ್ನಲಾಗಿದೆ.
ವಿನಯ್ ಜೈಲಿನ 4ನೇ ಕೋಣೆಯಲ್ಲಿದ್ದು, ಆತನಿರುವ ಕೊಠಡಿ ಹಾಗೂ ಶೌಚಾಲಯಕ್ಕೆ ಒಂದು ಪರದೆ ಹಾಕಲಾಗಿದೆ. ಅದರ ಸಹಾಯದಿಂದ ಜೈಲಿನ ಕೊಠಡಿಯಲ್ಲಿರುವ ಕಬ್ಬಿಣದ ತುಂಡಿಗೆ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾನೆ ಎನ್ನಲಾಗಿದೆ. ಕಬ್ಬಿಣದ ತುಂಡಿನ ಎತ್ತರ ಐದರಿಂದ ಆರು ಅಡಿಯಾಗಿದ್ದರಿಂದ ಆತನ ಪ್ರಾಣ ಉಳಿದಿದೆ ಎನ್ನಲಾಗಿದೆ.