ರಾಜಸ್ತಾನ, ಜ 17 (Daijiworld News/ MB) : ಇತ್ತೀಚೆಗೆ ಪೌರತ್ವ ನೀಡಲಾದ ಪಾಕಿಸ್ತಾನದಿಂದ ವಲಸೆ ಬಂದ ಮಹಿಳೆ ನೀತಾ ಸೋಧಾ ಭಾರತದ ರಾಜಸ್ತಾನದ ನಟ್ವಾರಾದ ಸ್ಥಳೀಯ ಪಂಚಾಯತ್ ಚುನಾವಣೆಗೆ ಸ್ಥರ್ಧಿಸಲು ಮುಂದಾಗಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನನ್ನ ಮಾವ ಪಂಚಾಯತ್ನ ಸಕ್ರಿಯ ಸದಸ್ಯರಾಗಿದ್ದು ನನ್ನ ರಾಜಿಕೀಯ ಜೀವನಕ್ಕೆ ಮಾರ್ಗದರ್ಶನ ನೀಡಿದ್ದಾರೆ. ನಾನು 18 ವರ್ಷಗಳ ಹಿಂದೆ ಭಾರತಕ್ಕೆ ಪಾಕಿಸ್ತಾನದಿಂದ ಅಧ್ಯಯನಕ್ಕೆಂದು ಬಂದಿದ್ದು ನಾಲ್ಕು ತಿಂಗಳುಗಳ ಹಿಂದೆ ನನಗೆ ಭಾರತದ ಪೌರತ್ವ ದೊರೆತಿದ್ದು ಈಗ ಪಂಚಾಯತ್ ಚುನಾವಣೆಯಲ್ಲಿ ನಾನು ಸ್ಪರ್ಧಿಸಲಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
"ನಾನು ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಗ್ರಾಮದಲ್ಲಿ ಉತ್ತಮ ಗುಣಪಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕೆಲಸ ಮಾಡುತ್ತೇನೆ. ಮಹಿಳೆಯರು ಮುಂಚೂಣಿಗೆ ತರುವಲ್ಲಿ ಪ್ರಯತ್ನ ಮಾಡುತ್ತೇನೆ. ಹಾಗೆಯೇ ಉತ್ತಮ ಗುಣಮಟ್ಟದ ಆಸ್ಪತ್ರೆಗಾಗಿ ಕಾರ್ಯನಿರ್ವಹಿಸುತ್ತೇನೆ" ಎಂದು ಹೇಳಿದ್ದಾರೆ.
ಭಾರತದ ಬಗ್ಗೆ ಮಾತನಾಡಿದ ಅವರು, "ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ಮಹಿಳೆಯರಿಗೆ ಜೀವಿಸಲು ಉತ್ತಮ ವಾತಾವರಣವಿದೆ. ಹಾಗೆಯೇ ಶಿಕ್ಷಣಕ್ಕೂ ಕೂಡಾ ಒಳ್ಳೆಯ ಅವಕಾಶಗಳಿವೆ. ನಾನು ಭಾರತಕ್ಕೆ ಬಂದದ್ದಿನಿಂದ ಇಲ್ಲಿಯ ಜನರು ನನಗೆ ಬೆಂಬಲ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.