ಕೋಲಾರ, ಜ.17 (Daijiworld News/PY) : ಅಪ್ರಾಪ್ತೆ ಮೇಲೆ ಅತ್ಯಾಚಾರಗೈದ ಹಿನ್ನೆಲೆ 65 ವರ್ಷದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಲು ಕೋಲಾರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸಿದೆ ಎಂದು ತಿಳಿದುಬಂದಿದೆ.
ತಾಲೂಕಿನ ಬೈರಂಡನಹಳ್ಳಿಯ ನಿವಾಸಿಯಾದ ವೆಂಕಟೇಶಪ್ಪ (65) ಎಂಬುವವರು ಅಪರಾಧಿಯಾಗಿದ್ದು, ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತೆಯ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಮುನಿಸ್ವಾಮಿ ಗೌಡ ವಾದ ಮಂಡಿಸಿದ್ದು, ನ್ಯಾಯಾಧೀಶೆ ಬಿ.ಎಸ್. ರೇಖಾ ಅವರು ಅತ್ಯಾಚಾರಿಗೆ ಮರಣದಂಡನೆ ವಿಧಿಸಿದ್ದಾರೆ.
2018ರ ಮೇ 1ರಂದು ಅಪರಾಧಿ ಸ್ವಗ್ರಾಮದಲ್ಲಿನ ಅಪ್ರಾಪ್ತೆಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದು, ವೇಮಗಲ್ ಠಾಣೆಯಲ್ಲಿ ವೆಂಕಟೇಶಪ್ಪ ಅವರ ವಿರುದ್ದ ಪೋಕ್ಸೋ ಅಡಿ ಪ್ರಕರಣ ದಾಖಲಾಗಿತ್ತು.