ನವದೆಹಲಿ, ಜ 18 (Daijiworld/MB) : ನಿರ್ಭಯಾ ತಾಯಿ ಆಶಾದೇವಿಯವರ ನೋವು ನನಗೆ ಅರ್ಥವಾಗುತ್ತದೆ. ಅವರು ಸೋನಿಯಾಗಾಂಧಿಯವರನ್ನು ಉದಾಹರಣೆಯಾಗಿ ತೆಗೆದುಕೊಂಡು ಅವರಂತೆ ಅಪರಾಧಿಗಳನ್ನು ಕ್ಷಮಿಸಲು ನಾನು ಒತ್ತಾಯಿಸುತ್ತೇನೆ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೇಳಿದ್ದಾರೆ.
ಈ ಕುರಿತು ಅವರು ಟ್ವೀಟ್ ಮಾಡಿದ್ದು, ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಸೋನಿಯಾ ಗಾಂಧಿಯವರು ತನ್ನ ಪತಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ ನಳಿನಿ ಅವರಿಗೆ ಸೋನಿಯಾ ಗಾಂಧಿಯವರು ಕ್ಷಮೆ ನೀಡಿದ್ದಾರೆ. ನಾವು ನಿರ್ಭಯಾ ತಾಯಿ ಆಶಾದೇವಿಯವರ ಪರವಾಗಿ ಇದ್ದೇವೆ. ಆದರೆ ಈ ಗಲ್ಲು ಶಿಕ್ಷೆಯ ಪರವಾಗಿ ಇಲ್ಲ ಎಂದು ಹೇಳಿದ್ದಾರೆ. ಈ ಟ್ವೀಟ್ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
1991ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ನಳಿನಿ ಬಂಧನಕ್ಕೊಳಗಾಗಿ ಅಪರಾಧಿ ಎಂದು ಸಾಬೀತಾಗಿ ಸದ್ಯ ಜೈಲು ಶಿಕ್ಷೆ ಅನುಭವಿಸುತ್ತಿದ್ದಾಳೆ.
ನಿರ್ಭಯಾ ಪ್ರಕರಣದ ಅಪರಾಧಿಗಳಾದ ವಿನಯ್, ಅಕ್ಷಯ್, ಪವನ್ ಮತ್ತು ಮುಕೇಶ್ ಸಿಂಗ್ ಎಂಬುವವರಿಗೆ ದೆಹಲಿ ನ್ಯಾಯಾಲಯ ಜನವರಿ 22ರಂದು ಗಲ್ಲು ಶಿಕ್ಷೆ ಎಂದು ಡೆತ್ ವಾರಂಟ್ ನೀಡಿತ್ತು. ಆದರೆ ಅದರಲ್ಲಿ ಮುಕೇಶ್ ಸಿಂಗ್ ಮತ್ತು ವಿನಯ್ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು. ಅವರ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಇದೀಗ ಫೆಬ್ರವರಿ 1ರಂದು ನೇಣಿಗೇರಿಸುವಂತೆ ಹೊಸ ಆದೇಶ ಹೊರಡಿಸಿದೆ.