ಕೋಝಿಕ್ಕೋಡು, ಜ 18 (Daijiworld/MB) : ರಾಹುಲ್ ಗಾಂಧಿಯನ್ನು ಆಯ್ಕೆ ಮಾಡಿ ಕೇರಳ ಬಹುದೊಡ್ಡ ತಪ್ಪು ಮಾಡಿದೆ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಹೇಳಿದ್ದಾರೆ.
ಶುಕ್ರವಾರ ಕೇರಳದ ಕೋಝಿಕ್ಕೋಡಿನಲ್ಲಿ ನಡೆದ ಕೇರಳ ಸಾಹಿತ್ಯ ಹಬ್ಬದಲ್ಲಿ ರಾಷ್ಟ್ರಪ್ರೇಮ ಮತ್ತು ಅತಿರೇಕರದ ರಾಷ್ಟ್ರಪ್ರೇಮ ವಿಷಯ ಕುರಿತು ಮಾತನಾಡಿದ ಅವರು, ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಭಾರತದ ಅತಿದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಇಂದು ಕುಟುಂಬ ರಾಜಕಾರಣ ನಡೆಸಿದ್ದರಿಂದಾಗಿ ದೇಶದಲ್ಲಿ ಹಿಂದುತ್ವ ಹಾಗೂ ಅತಿರೇಕದ ರಾಷ್ಟ್ರ ಪ್ರೇಮದ ವಾತಾವರಣ ಸೃಷ್ಟಿಯಾಗಿದೆ ಎಂದುಅಭಿಪ್ರಾಯಪಟ್ಟರು.
ರಾಹುಲ್ ಗಾಂಧಿಯವರ ಮೇಲೆ ನನಗೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವರು ಸಭ್ಯ ವ್ಯಕ್ತಿ, ಉತ್ತಮ ವರ್ತನೆ ಹೊಂದಿದ್ದಾರೆ. ಆದರೆ ಭಾರತಕ್ಕೆ ಕುಟುಂಬಕ್ಕೆ ರಾಜಕೀಯ ಬೇಕಾಗಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಮತ್ತೆ ರಾಹುಲ್ ಗಾಂಧಿಗೆ ಮಲಯಾಳಿಗಳಾದ ನೀವು ಅವಕಾಶ ಮಾಡಿಕೊಡುವ ದೊಡ್ಡ ತಪ್ಪು ಮಾಡಿದರೆ. ನೀವು ಪರೋಕ್ಷವಾಗಿ ನರೇಂದ್ರ ಮೋದಿಯವರಿಗೆ ಲಾಭ ಮಾಡಿಕೊಟ್ಟಂತೆ ಎಂದು ಹೇಳಿದರು.
ಭಾರತದ ಬೆಳವಣಿಗೆಗೆ ಹಲವು ಉತ್ತಮ ಅದ್ಭುತ ಕೆಲಸಗಳನ್ನು ಮಾಡಿರುವ ಕೇರಳಿಗರು ರಾಹುಲ್ ಗಾಂಧಿಯವರನ್ನು ಸಂಸತ್ತಿಗೆ ಕಳುಹಿಸಿ ತಪ್ಪು ಮಾಡಿದ್ದೀರಿ. ರಾಹುಲ್ ಗಾಂಧಿಯವರಿಂದಲ್ಲೇ ಮೋದಿಯವರಿಗೆ ಅನುಕೂಲವಾಗಿಲ್ಲ ಅದರಲ್ಲಿ ಅವರ ಸ್ವ ಪ್ರಯತ್ನವೂ ಇದೆ. ಅವರು ಕಠಿಣ ಪರಶ್ರಮಿ. ಅವರೆಂದು ಯೂರೋಪ್ಗೆ ವಿಹಾರಕ್ಕೆಂದು ತೆರಳಿಲ್ಲ ಎಂದು ಅವರು ತಿಳಿಸಿದರು.