ಮೊರಾದಾಬಾದ್ , ಜ.18 (Daijiworld News/PY) : "ದೇಶದ ನೈತಿಕತೆ, ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯವನ್ನು ಆರ್ಎಸ್ಎಸ್ ಮಾಡುತ್ತಿದೆ, ಆರ್ಎಸ್ಎಸ್ ಹಾಗೂ ರಾಜಕೀಯಕ್ಕೂ ಸಂಬಂಧವಿಲ್ಲ" ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಉತ್ತರಪ್ರದೇಶದ ಮೊರಾದಾಬಾದ್ನಲ್ಲಿ ನಡೆದ ಆರ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, "ಚುನಾವಣೆಯ ಪ್ರಕ್ರಿಯೆಯಲ್ಲಿ ನಾವು ತೊಡಗುವುದಿಲ್ಲ. ಸಂಘಟನೆಯು 60 ವರ್ಷಗಳಿಂದ ದೇಶದ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯಗಳನ್ನು ಮಾಡುತ್ತಿದೆ" ಎಂದರು.
"ಸಮಾಜದಲ್ಲಿರುವ ಎಲ್ಲಾ ವರ್ಗಗಳ ಜನರು ಸಂಘಟನೆಯ ಭಾಗವೇ ಆಗಿದ್ದಾರೆ. ಕೆಲವರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಎಲ್ಲಾ ಭಾರತೀಯರು ಹಿಂದೂಗಳೇ. ಅನೇಕ ದೇಶಗಳಲ್ಲಿ ವಿವಿಧತೆಯಲ್ಲಿ ಏಕತೆ ಎಂದು ಕೂಗಿದರೆ, ಭಾರತ ದೇಶದಲ್ಲಿ ಮಾತ್ರ ಏಕತೆಯಿಂದ ವಿವಿಧತೆ ಎಂದು ಹೇಳುತ್ತೇವೆ" ಎಂದು ತಿಳಿಸಿದರು.