ಹೈದರಾಬಾದ್, ಜ 19 (Daijiworld News/MB) : ದೇಶದ ನಿಜವಾದ ಸಮಸ್ಯೆ ಜನಸಂಖ್ಯೆಯಲ್ಲ, ನಿರುದ್ಯೋಗ ಎಂದು ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ಮೋಹನ್ ಭಾಗವತ್ ಅವರಿಗೆ ತಿರುಗೇಟು ನೀಡಿದ್ದಾರೆ.
ನನಗೆ ಇಬ್ಬರಿಗಿಂತ ಹೆಚ್ಚಿಗೆ ಮಕ್ಕಳಿದ್ದಾರೆ. ಬಹುತೇಕ ಬಿಜೆಪಿ ನಾಯಕರಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದಾರೆ. ಆದರೂ ಆರ್ಎಸ್ಎಸ್ ಮುಸ್ಲಿಂಮರ ಜನಸಂಖ್ಯೆ ಕಡಿಮೆಯಾಗಬೇಕೆಂದು ಹೇಳುತ್ತೀರಿ. ದೇಶದ ನಿಜವಾದ ಸಮಸ್ಯೆ ಜನಸಂಖ್ಯೆಯಲ್ಲ, ನಿರುದ್ಯೋಗ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ವಿರುದ್ಧ ವಾಗ್ದಾಳೆ ನಡೆಸಿದ ಅವರು, ಬಡತನ ನಿರ್ಮೂಲನೆ ಮಾಡಲು ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿ ಅಧಿಕಾರಕ್ಕೆ ಬಂದ ನೀವು ಎಷ್ಟು ಯುವರಿಗೆ ಉದ್ಯೋಗ ನೀಡಿದ್ದೀರಿ ಎಂದು ಪ್ರಶ್ನಿಸಿದ್ದು ಓವೈಸಿ 2018ರಲ್ಲಿ ನಿರುದ್ಯೋಗ ಸಮಸ್ಯೆಯಿಂದ ಪ್ರತಿ ನಿತ್ಯ 36 ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶಕ್ಕೆ ಆಗಮಿಸಿದ ಮೋಹನ್ ಭಾಗವತ್ ಅವರು ದೇಶದ ಅಭಿವೃಧ್ಧಿಗಾಗಿ ಎರಡು ಮಕ್ಕಳನ್ನು ಮಾತ್ರ ಹೊಂದಬೇಕೆಂಬ ನಿಯಮ ಸರಿಯಾದ ರೀತಿಯಲ್ಲಿ ಜಾರಿಯಾಗ ಬೇಕು ಎಂದು ಹೇಳಿದ್ದರು.