ರಾಯಚೂರು, ಜ 19 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ, ಎನ್ ಆರ್ ಸಿ, ಎನ್ಆರ್ಪಿ ವಿರೋಧಿಸಿ ಸಿಂಧನೂರಿನಲ್ಲಿ ರಕ್ತದ ಸಹಿ ಸಂಗ್ರಹ ಚಳವಳಿ ನಡೆಸಲಾಗಿದೆ.
ಭಾನುವಾರ ಸಿಂಧನೂರಿನ ಆರ್ಜಿಎಂ ಶಾಲಾ ಮೈದಾನದಲ್ಲಿ ಸಿಎಎ, ಎನ್ಆರ್ಸಿ ವಿರೋಧಿಸಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಈ ವೇಳೆ ರಕ್ತದಲ್ಲೇ ಸಹಿ ಸಂಗ್ರಹ ಮಾಡಲಾಗಿದೆ.
ನೋ ಎನ್ಆರ್ಸಿ, ನೋ ಸಿಎಎ, ನೋ ಎನ್ಆರ್ಪಿ ಎಂದು ಬರೆದು ಅದರೊಂದಿಗೆ ದೇಶಕ್ಕಾಗಿ ರಕ್ತ ಹರಿಸಲು ಸಿದ್ಧ ಎನ್ನುವ ಘೋಷಣೆ ಬರೆಯಲಾಗಿದೆ. ಹಾಗೆಯೇ ರಾಷ್ಟ್ರಪತಿಗೆ ಪತ್ರ ಚಳವಳಿ ಕೂಡ ನಡೆಸಲಾಯಿದೆ.