ಮೈಸೂರು, ಜ 19 (Daijiworld News/MB) : ಕೆಪಿಸಿಸಿಗೆ ನಾಲ್ಕು ಕಾರ್ಯಾಧ್ಯಕ್ಷ ಸ್ದಾನ ಮಾಡುವ ಕುರಿತು ಚಿಂತನೆ ನಡೆದಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಭಾನುವಾರ ಹೇಳಿದ್ದಾರೆ.
ಜಾತಿ ಹಾಗೂ ಪ್ರದೇಶವಾರು ಸಮತೋಲನ ಮಾಡುವ ಹಿನ್ನಲೆಯಲ್ಲಿ ಈ ಚಿಂತನೆ ನಡೆಸಲಾಗಿದ್ದು ಒಂದು ವಾರದಲ್ಲಿ ಈ ವಿಚಾರ ಬಹಿರಂಗ ಮಾಡಲಾಗುತ್ತದೆ. ದೆಹಲಿ ವಿಧಾನಸಭೆ ಚುನಾವಣೆಯಿಂದಾಗಿ ಕೆಸಿಸಿಸಿ ಅಧ್ಯಕ್ಷ ಸ್ಥಾನ ನಿರ್ಧಾರದ ವಿಳಂಬವಾಗಿದೆ ಎಂದು ಮಾಧ್ಯಮಕ್ಕೆ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಸೇರಿದಂತೆ ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ಅವರ ಆಸೆ ಬೇಗನೆ ಈಡೇರಲಿ. ಸಚಿವ ಸ್ಥಾನ ಸಿಗಬೇಕು ಎಂಬ ಆಸೆಯಿಂದಾಗಿ ಕುಮಾರಸ್ವಾಮಿ ಸರಕಾರವನ್ನು ಬೀಳಿಸಲು ಶತ ಪ್ರಯತ್ನ ಮಾಡಿದ್ದಾರೆ. ಯಡಿಯೂರಪ್ಪ ಅವರು ಅವರೆಲ್ಲರ ಆಸೆಯನ್ನು ಬೇಗನೇ ಈಡೇರಿಸಲಿ ಎಂದು ನನ್ನ ಬಯಕೆ ಎಂದು ವ್ಯಂಗ್ಯ ಮಾಡಿದರು.