ನವದೆಹಲಿ, ಜ.19 (Daijiworld News/PY) : ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರು 10 ಅಂಶಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಅದಕ್ಕೆ 'ಕೇಜ್ರಿವಾಲ್ ಗ್ಯಾರಂಟಿ ಕಾರ್ಡ್' ಎಂದು ಹೆಸರು ನೀಡಿದ್ದಾರೆ.
ಪ್ರಣಾಳಿಕೆಯಲ್ಲಿ ಎಎಪಿ ಪಕ್ಷವು ಜಯ ಸಾಧಿಸಿದರೆ ಮುಂದಿನ 5 ವರ್ಷಗಳಲ್ಲಿ ಮುಖ್ಯವಾಗಿ 24 ಗಂಟೆ ಕುಡಿಯುವ ನೀರಿನ ಸೌಲಭ್ಯ, ದೆಹಲಿಯಲ್ಲಿ ಜನಿಸಿದ ಎಲ್ಲಾ ಮಕ್ಕಳಿಗೂ ಶಿಕ್ಷಣದ ಸೌಲಭ್ಯ, ಪರಿಸರ ಸ್ವಚ್ಚತೆ, ಯಮುನಾ ನದಿ ಸ್ವಚ್ಚತೆ, ಸ್ಲಂ ನಿವಾಸಿಗಳಿಗೆ ಮನೆ ಮುಂತಾದ ಹಲವು ಅಂಶಗಳನ್ನು ಘೋಷಿಸಿದ್ದಾರೆ.
ಎಲ್ಲಾ ಕುಟುಂಬಗಳಿಗೆ ಉಚಿತಾ ಚಿಕಿತ್ಸಾ ಸೌಲಭ್ಯ, ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ನಲ್ಲಿ ಪ್ರಯಾಣ, ಪರಿಸರದ ಸ್ವಚ್ಛತೆಗಾಗಿ 2 ಕೋಟಿ ಮರಗಳನ್ನು ಬೆಳೆಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದ್ದಾರೆ.
ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ಮೊಹಲ್ಲಾ ಮಾರ್ಷಲ್ ಎಂಬ ವಿನೂತನ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಪ್ರತಿ ರಸ್ತೆಯಲ್ಲೂ ಸಿಸಿಟಿವಿ ಅಳವಡಿಸಲಾಗುವುದು. ಮುಂದಿನ 10 ದಿನಗಳಲ್ಲಿ ಪೂರ್ತಿ ಪ್ರಣಾಳಿಕೆಯನ್ನು ಘೋಷಿಸಿಲಾಗುವುದು ಎಂದು ಹೇಳಿದರು.