ನವದೆಹಲಿ, ಜ.19 (Daijiworld News/PY) : "ತಮ್ಮ ಪಕ್ಷದವರಾದ ಹಾರ್ದಿಕ್ ಪಟೇಲ್ ಅವರಿಗೆ ಪದೇಪದೇ ಬಿಜೆಪಿ ಕಿರುಕುಳ ನೀಡುತ್ತಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
"ಹಾರ್ದಿಕ್ ಅವರು ಸಮಾಜದ ಜನರ ಪರವಾಗಿ ಹೋರಾಡುತ್ತಿದ್ದಾರೆ. ಜನರಿಗೆ ಉದ್ಯೋಗ ಹಾಗೂ ವಿದ್ಯಾರ್ಥಿವೇತನ ದೊರಕಿಸಿಕೊಡುವಂತೆ ಹಾಗೂ ರೈತರ ಹಕ್ಕುಗಳಿಗಾಗಿ ಧ್ವನಿಯೆತ್ತಿದ್ದಾರೆ. ಆದರೆ ಆ ಕೆಲಸವನ್ನು ಬಿಜೆಪಿ ದೇಶದ್ರೋಹ ಎನ್ನುತ್ತಿದೆ" ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಹಾರ್ದಿಕ್ ಪಟೇಲ್ ಅವರನ್ನು ಅಹಮದಾಬಾದ್ ಜಿಲ್ಲೆಯ ವೀರಂಗಾಂನಲ್ಲಿ ಪೊಲೀಸರು ಜ.18 ಶನಿವಾರದಂದು ಬಂಧಿಸಿದ್ದರು. 2015ರ ದೇಶದ್ರೋಹ ಪ್ರಕರಣದ ವಿಚಾರಣೆಗೆ ಹಾಜರಾಗದ ಕಾರಣ ಅವರ ಬಂಧನಕ್ಕೆ ಅಹಮದಾಬಾದ್ನ ಸೆಷನ್ಸ್ ಕೋರ್ಟ್ ವಾರಂಟ್ ಜಾರಿ ಮಾಡಿದ್ದು, ಇದಾದ ಕೆಲವೇ ಗಂಟೆಯಲ್ಲಿ ಹಾರ್ದಿಕ್ ಅವರನ್ನು ಬಂಧಿಸಲಾಗಿತ್ತು ಎನ್ನಲಾಗಿದೆ.