ನವದೆಹಲಿ, ಜ. 20 (Daijiworld News/MB): ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿಯ ಇರುವುದರಿಂದ ಬಿಜೆಪಿಗೆ ನೆರವಾಗುತ್ತಿದೆ ಎಂದು ಹೇಳಿಕೆ ನೀಡಿದ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ, ತನ್ನ ಹೇಳಿಕೆಯಿಂದಾಗಿ ಉಂಟಾಗಿರುವ ಗೊಂದಲಗಳನ್ನು ಕಂಡು ಸರಣಿ ಟ್ವೀಟ್ಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.
‘ಮೋದಿ, ಹಿಂದುತ್ವ ಮತ್ತು ಭಾರತ’ದ ಸ್ಥೂಲ ಅರ್ಥದಲ್ಲಿ ನಾನು ಆ ಹೇಳಿಕೆ ನೀಡಿದ್ದೇನೆ. ರಾಹುಲ್ ಗಾಂಧಿಯನ್ನು ವಯನಾಡ್ನಲ್ಲಿ ಆಯ್ಕೆ ಮಾಡಿರುವ ಹಿನ್ನಲೆಯಲ್ಲಿ ಮಲಯಾಳಿಗಳನ್ನು ಆಕ್ಷೇಪಿಸಲು ನಾನು ಹೀಗೆ ಹೇಳಿದ್ದೇನೆ ಎಂದು ಗುಹಾ ಟ್ವೀಟ್ ಮಾಡಿದ್ದಾರೆ.
ಈ ಪ್ರತಿಕ್ರಿಯೆಯನ್ನು ಕಾಂಗ್ರೆಸ್ ಮುಖಂಡ ಶಶಿ ತರೂರ್ ಸ್ವಾಗತಿಸಿ, ಟ್ವೀಟ್ ಮಾಡಿ"ನೀವು ಈ ಕುರಿತು ಸ್ಪಷ್ಟನೆ ನೀಡಿದಕ್ಕಾಗಿ ಧನ್ಯವಾದಗಳು. ಪ್ರಧಾನಿ ರಾಜಕೀಯಕ್ಕೆಂದು ಹಾಕುವ ಕಠಿಣ ಪರಿಶ್ರಮ ಈ ದೇಶವನ್ನು ವಿಭಜನೆ ಮಾಡುವುದೆ ಹೊರತು ಬೇರೆ ಯಾವ ಪರಿಣಾಮ ಬೀರುವುದಿಲ್ಲ ಎಂದು ನಿಮ್ಮ ಹೇಳಿಕೆ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಶಶಿ ತರೂರ್ ಪ್ರತಿಕ್ರಿಯೆಗೆ ಮರುಟ್ವೀಟ್ ಮಾಡಿರುವ ಗುಹಾ ಅವರು, ಮೋದಿಯ ಕಾರ್ಯನೀತಿಯನ್ನು ನಾನು ಕಳೆದ ಹಲವು ವರ್ಷಗಳಿಂದ ಟೀಕೆ ಮಾಡುತ್ತಲ್ಲಿದ್ದೇನೆ. ರಾಜಕೀಯ ವಿಷಯದಲ್ಲಿ ಮೋದಿಗೆ ಅನುಭವವಿದೆ. ಆದರೆ ಐದನೇ ತಲೆಮಾರಿನ ರಾಹುಲ್ಗೆ ಅನುಭವವಿಲ್ಲ. ಇದು ಮೋದಿಗೆ ಅನುಕೂಲವಾಗಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಗುಹಾ ಅವರು ಕೇರಳ ಸಾಂಸ್ಕೃತಿಕ ಉತ್ಸವದಲ್ಲಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು ಬಲಪಂಥೀಯರು ಇದನ್ನು ಸ್ವಾಗತಿಸಿ ಇನ್ನಷ್ಟು ವಿವರವಾಗಿ ತಿಳಿಸಿ ಎಂದು ಹೇಳಿದ್ದು ಕಾಂಗ್ರೆಸ್ ಸೇರಿದಂತೆ ಹಲವರು ವಿರೋಧ ಮಾಡಿದ್ದಾರೆ.