ನವದೆಹಲಿ, ಜ 20 (Daijiworld News/MB): ವಿದ್ಯಾರ್ಥಿಗಳಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ವರ್ಷ ನಡೆಸುವ "ಪರೀಕ್ಷಾ ಪೆ ಚರ್ಚಾ" ಕಾರ್ಯಕ್ರಮ ಈ ಬಾರಿ ನವದೆಹಲಿಯ ಟಲ್ಕಟೊರಾ ಸ್ಟೇಡಿಯಂನಲ್ಲಿ ಇಂದು 11 ಗಂಟೆಗೆ ಆರಂಭವಾಗಲಿದೆ.
ದೇಶದ ವಿವಿಧ ಶಾಲೆಗಳ ಸುಮಾರು ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಂದು ನಡೆಯಲಿರುವ ಈ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಹಾಗೆಯೇ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಮತ್ತು ಪೋಷಕರು ಕೂಡಾ ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಂದರ್ಭದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗದೆ ಪರೀಕ್ಷೆ ಎದುರಿಸುವಂತೆ ಆತ್ಮಸ್ಥೈರ್ಯ ತುಂಬುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯವರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ.
ಈ ಕಾರ್ಯಕ್ರಮವನ್ನು ಪ್ರಧಾನಿಯವರು 2017ರಲ್ಲಿ ಜಾರಿಗೆ ತಂದಿದ್ದು ಇದು ಮೂರನೇ ಕಾರ್ಯಕ್ರಮವಾಗಿದ್ದು ವಿದ್ಯಾರ್ಥಿಗಳೊಂದಿಗೆ ಸಚಿವ ಸುರೇಶ್ ಕುಮಾರ್ ಅವರು ಕೂಡಾ ಈ ಕಾರ್ಯಕ್ರಮವನ್ನು ವೀಕ್ಷನೆ ಮಾಡಲಿದ್ದಾರೆ.