ಬೆಂಗಳೂರು, ಜ 20 (Daijiworld News/MSP): ನಟ ದುನಿಯಾ ವಿಜಯ್ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಮಾಡಿದ ಯಡವಟ್ಟು ಸಂಕಷ್ಟ ತಂದೊಡ್ಡಿದೆ.
ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅಭಿಮಾನಿಗಳು ತಂದಿದ್ದ ಕೇಕ್ ಕಟ್ ಮಾಡಲು ತಲ್ವಾರ್ ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಗಿರಿನಗರ ಠಾಣೆ ಇನ್ಸ್ಪೆಕ್ಟರ್ ಸಿದ್ದಲಿಂಗಯ್ಯ ಅವರಿಗೆ ಡಿಸಿಪಿ ರೋಹಿಣಿ ಸಪೇಟ್ ನಟ ವಿಜಯ್ ಗೆ ನೊಟೀಸ್ ನೀಡಲು ಸೂಚನೆ ನೀಡಿದ್ದಾರೆ.
ದುನಿಯಾ ವಿಜಯ್ ಕೇಕ್ ಕಟ್ ಮಾಡಲು ಕತ್ತಿ ಬಳಸಿದ ವಿಡಿಯೋ ವೈರಲ್ ಆಗಿತ್ತು. ಕಾನೂನು ಪ್ರಕಾರ ಐದು ಇಂಚಿಗೂ ಉದ್ದದ ಕತ್ತಿಯನ್ನು ಬಳಸುವಂತಿಲ್ಲ, ಮತ್ತು ಇಟ್ಟುಕೊಳ್ಳುವಂತಿಲ್ಲ. ಅಂತವರ ವಿರುದ್ದ ಆರ್ಮ್ಸ್ ಆಕ್ಟ್ ಅಡಿ ಪೊಲೀಸರು ಕೇಸು ದಾಖಲಿಸಬಹುದು.
ನೊಟೀಸ್ ಬಗ್ಗೆ ತಮಗೆ ಮಾಹಿತಿ ಇಲ್ಲ. ತಪ್ಪಾಗಿದ್ದರೆ ಕ್ಷಮೆಯಾಚಿಸುವುದಾಗಿ ವಿಜಯ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.