ಬೆಂಗಳೂರು, ಜ.20 (Daijiworld News/PY) : "ಸಿದ್ದರಾಮಯ್ಯ ಅವರ ಮೇಲಿನ ಭಯದಿಂದಾಗಿ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ" ಎಂದು ಮಾಜಿ ಸಚಿವ ಎಂಟಿ ಬಿ ನಾಗರಾಜ್ ಹೇಳಿದ್ದಾರೆ.
"ಈವರೆಗೆ ಕೆಪಿಸಿಸಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗದ ಸ್ಥಿತಿಗೆ ತಲುಪಲು ಕಾಂಗ್ರೆಸ್ ಹೈಕಮಾಂಡ್ ಲೋ ಕಮಾಂಡ್ ಆಗಿರುವುದೇ ಕಾರಣ. ಕಾಂಗ್ರೆಸ್ ಈಗ ಮೂರು ಗುಂಪುಗಳಾಗಿದ್ದು ಈ ಸ್ಥಿತಿಗೆ ಗುಂಪುಗಾರಿಕೆಯೇ ಕಾರಣ" ಎಂದು ಹೇಳಿದರು.
"ರಾಜ್ಯ ಕಾಂಗ್ರೆಸ್ನಲ್ಲೀಗ 3 ಗುಂಪುಗಳಾಗಿವೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ. ಶಿವಕುಮಾರ್ ಹೆಸರಿನಲ್ಲಿ 3 ಗುಂಪುಗಳಿವೆ" ಎಂದರು.
"ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಂ.ಬಿ ಪಾಟೀಲ್ ಸಿಗುವಂತೆ ಅವರ ಪರ ನಿಂತಿದ್ದಾರೆ. ಡಿಕೆಶಿ ಅವರು ಕೂಡಾ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ. ಹರಿಪ್ರಸಾದ್, ಕೆಎಚ್ ಮುನಿಯಪ್ಪ ಅವರದ್ದು ಇನ್ನೊಂದು ಬಣ" ಎಂದು ಹೇಳಿದರು.