ಬೆಂಗಳೂರು, ಜ 21 (Daijiworld News/MB) : ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಚರ್ಚ್ನಲ್ಲಿ ದುಷ್ಕರ್ಮಿಗಳು ದರೋಡೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಅಪರಿಚಿತ ದುಷ್ಕರ್ಮಿಗಳಿಂದ ಕೆಂಗೇರಿಯ ಸಂತ ಪ್ರಾನ್ಸಿಸ್ ಅಝಿಜಿ ಚರ್ಚ್ನಲ್ಲಿ ಈ ಘಟನೆ ನಡೆದಿದೆ.
ದುಷ್ಕರ್ಮಿಗಳು ಚರ್ಚ್ನಿಂದ ಯಾವುದೇ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿಲ್ಲ ಎಂದು ತಿಳಿದು ಬಂದಿದ್ದು, ಅವರು ಚರ್ಚ್ಗೆ ಹಾನಿ ಮಾಡಲು ಬಂದಿದ್ದಾರೆ ಎಂದು ಹೇಳಲಾಗಿದೆ. ಚರ್ಚ್ನ ಪವಿತ್ರ ವಸ್ತುಗಳಿಗೆ ಹಾನಿ ಮಾಡಲಾಗಿದೆ. ಹಾಗೆಯೇ ಚರ್ಚ್ನಲ್ಲಿರುವ ಮೈಕ್ ಹಾಗೂ ಮರದ ಮೇಜು ಬೆಂಚುಗಳಿಗೂ ಹಾನಿ ಮಾಡಲಾಗಿದೆ.
ಈ ಕುರಿತು ಚರ್ಚ್ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಈವರೆಗೂ ಯಾರ ಬಂಧನವೂ ಆಗಿಲ್ಲ.