ಬೆಂಗಳೂರು, ಜ 21 (DaijiworldNews/SM): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆ ದುರದೃಷ್ಟಕರ ಎಂದಿದ್ದಾರೆ.
ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ ಶಕ್ತಿಗಳನ್ನು ಮಟ್ಟ ಹಾಕಲಾಗುವುದು. ಭದ್ರತೆಗೆ ಭಂಗ ತರುವಂತಹ ಯಾವುದೇ ರೀತಿಯ ಚಟುವಟಿಕೆಗಳಿಗೆ ಸಹಿಸುವುದಿಲ್ಲ. ಹಾಗೂ ಅಂತಹ ಕೃತ್ಯಗಳಿಗೆ ಅವಕಾಶ ಕೂಡ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ನಾಗರಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂಬುವುದಾಗಿ ಸಿಎಂ ಬಿಎಸ್ ವೈ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಜನವರಿ 20ರ ಸೋಮವಾರದಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್ ಪತ್ತೆಯಾಗಿ ಸಾಕಷ್ಟು ಭೀತಿಯನ್ನು ಸೃಷ್ಟಿಸಿತ್ತು. ಬಳಿಕ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಅದನ್ನು ನಿಷ್ಕ್ರೀಯಗೊಳಿಸುವಲ್ಲಿ ಅಧಿಕಾರಿಗಳು ಪೊಲೀಸರು, ನಿಷ್ಕ್ರೀಯ ದಳ ಯಶಸ್ವಿಯಾಗಿದೆ. ಇನ್ನು ಶಂಕಿತ ಜಾಡು ಹಿಡಿದು ಪೊಲೀಸರು ತೆರಳಿದ್ದು, ಆರೋಪಿಗಳ ಪತ್ತೆ ವಿಶೇಷ ತಂಡಗಳನ್ನು ರಚಿಸಿ ಈಗಾಗಲೇ ಅವರು ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಶೀಘ್ರವೇ ಆರೋಪಿಗಳ ಬಂಧನದ ಬಗ್ಗೆ ಕಮಿಷನರ್ ಹರ್ಷ ಭರವಸೆ ವ್ಯಕ್ತಪಡಿಸಿದ್ದಾರೆ.