ಬೆಂಗಳೂರು, ಜ 22 (Daijiworld News/MB) : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್ ಪೊಲೀಸರಿಗೆ ಶರಣಾಗಿದ್ದನ್ನು ನೋಡಿದರೆ ಇದು ನಾಟಕದಂತೆ ಕಾಣುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಪೊಲೀಸರು ಆರೋಪಿ ಆದಿತ್ಯ ರಾವ್ ತಾನಾಗಿಯೇ ಬಂದು ಶರಾಣಾಗಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ ಆದಿತ್ಯ ಶರಣಾಗಿರುವುದು ನಾಟಕೀಯ ಎಂದು ನನಗನಿಸುತ್ತದೆ. ಯಾಕೆಂದರೆ ಆರೋಪಿ ಮಂಗಳೂರಿನಿಂದ ಬೆಂಗಳೂರಿಗೆ ಬಂದು ಶರಣಾಗಿದ್ದಾನೆ ಎಂದಾದರೆ ಆತನನ್ನು ಅಲ್ಲಿಗೆ ಕರೆದುಕೊಂಡು ಹೋದವರು ಯಾರು ಎಂದು ಪ್ರಶ್ನಿಸಿದರು.
ಆತ ಲಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಎಂದು ಹೇಳಲಾಗುತ್ತಿದೆ. ಆದರೆ ಆತ ಪೊಲೀಸರಿಗೆ ಶರಣಾಗಲು ಮಂಗಳೂರಿನಿಂದ ಬೆಂಗಳೂರಿಗೆ ಯಾಕೆ ಬಂದ ಎಂದು ತಿಳಿಯುತ್ತಿಲ್ಲ ಎಂದು ಹೇಳಿದರು.
ಮುಸ್ಲಿಮರು ಮಾತ್ರ ಭಯೋತ್ಪಾದಕರು ಆಗುತ್ತಾರೆ ಎಂದು ಹೇಳಲಾಗುವುದಿಲ್ಲ. ಈ ಪ್ರಕರಣ ನೋಡಿದರೆ ಹಿಂದೂಗಳು ಸಹ ಭಯೋತ್ಪಾದಕರು ಆಗುವ ವಾತಾವರಣ ಇದೆ ಎಂಬುದು ತಿಳಿದು ಬರುತ್ತದೆ ಎಂದು ಬಿಜೆಪಿ ತೀರ್ಥ ಪ್ರಸಾದ ಕೊಡುತ್ತೆ. ಹಿಂದಿನಿಂದ ಭಜರಂಗದಳ ತ್ರಿಶೂಲ ಹಿಡಿದುಕೊಂಡು ಬರುತ್ತೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಬದಲ್ಲಿ ಇಂತಹ ಘಟನೆಗಳು ನಡೆದಿಲ್ಲ. ಆದರೆ ಈಗ ಇಂತಹ ಘಟನೆ ನಡೆಯುತ್ತಿದೆ. ಈ ಘಟನೆಗಳಿಗೆ ಕಾರಣ ಯಾರು? ಇದನ್ನು ನೀವು ಹೇಗೆ ಸರಿಪಡಿಸುತ್ತಾರೆ ಎಂದು ಕೆ.ಎಸ್ ಈಶ್ವರಪ್ಪ ಅವರನ್ನು ಪ್ರಶ್ನಿಸಿದರು.
ಈ ಘಟನೆ ಬಿಜೆಪಿಯವರ ಅಪರಾಧ. ಅವರೇ ಸಮಾಜದ ನಡುವೆ ಬಿರುಕು ಸೃಷ್ಟಿ ಮಾಡಿರುವುದು. ಯಾವುದೇ ಸಮಾಜವನ್ನು ಓಲೈಕೆ ಮಾಡಲು ನಾನು ಕೆಲಸ ಮಾಡುತ್ತಿಲ್ಲ. ನಾನು ಎಲ್ಲಾ ಸಮುದಾಯದವರ ಪರವಾಗಿ ಅಂದರೆ ಜನರ ಪರವಾಗಿ ಧ್ವನಿ ಎತ್ತುತ್ತೇನೆ. ಈವರೆಗೂ ಅನ್ಯಾಯವಾದ ಸಂದರ್ಭದಲ್ಲಿ ನಾನು ಅದನ್ನು ವಿರೋಧಿಸಿ ಮಾತನಾಡಿದ್ದೇನೆ ಎಂದು ಹೇಳಿದರು.
ಹಲವು ಜನರು ಭಾರತ ಬಿಟ್ಟು ವಿದೇಶದಲ್ಲಿ ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ. ಇಲ್ಲಿ ಉದ್ಯೋಗ ಸಿಗದ ಹಿನ್ನಲೆಯಲ್ಲಿ ಅವರು ವಿದೇಶಕ್ಕೆ ಹೋಗುತ್ತಾರೆ. ಕೇಂದ್ರ ಈಗ ಸಿಎಎ ಎನ್ಆರ್ಸಿ ಜಾರಿ ಮಾಡಿದೆ. ಆದರೆ ಅದರ ಅವಶ್ಯಕತೆ ಜನರಿಗಿಲ್ಲ. ಮಿಸ್ಟರ್ ಮೋದಿ ನೀವು ಈಗ ಉದ್ಯೋಗ ನೀಡುವುದರ ಕಡೆಗೆ ಗಮನ ಹರಿಸಿ ಎಂದು ತಿಳಿಸಿದರು.