ನವದೆಹಲಿ, ಜ.22 (Daijiworld News/PY): "ಎಲ್ಲಾ ಧರ್ಮಗಳನ್ನು ಭಾರತೀಯ ಮೌಲ್ಯಗಳು ಸಮಾನವಾಗಿ ಪರಿಗಣಿಸುವುದರಿಂದ ನಮ್ಮ ದೇಶ ಜಾತ್ಯಾತೀತವಾಗಿದೆ. ಪಾಕಿಸ್ತಾನದಂತ ಧರ್ಮಾಧಾರಿತ ಪ್ರಜಾಪ್ರಭುತ್ವ ನಮ್ಮದಲ್ಲ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಎನ್ಸಿಸಿಯ ಗಣರಾಜ್ಯೋತ್ಸವ ಶಿಬಿರದಲ್ಲಿ ಮಾತನಾಡಿದ ಅವರು, "ನಾವು ಧರ್ಮಗಳ ಮಧ್ಯೆ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದೇವೆ. ನಮ್ಮ ನೆರೆಯ ರಾಷ್ಟ್ರವು ಧರ್ಮಾಧಾರಿತ ದೇಶ ಎಂದು ಘೋಷಿಸಿಕೊಂಡಿದೆ. ಆದರೆ ಈ ವಿಚಾರವಾಗಿ ನಾವು ಹಾಗೆ ಮಾಡುವುದಿಲ್ಲ "ಎಂದು ಹೇಳಿದರು.
"ಅಮೇರಿಕಾ ಧರ್ಮಾಧಾರಿತ ರಾಷ್ಟ್ರವಾಗಿದೆ. ಆದರೆ ಭಾರತ ಅಲ್ಲ. ಏಕೆಂದರೆ, ನಮ್ಮ ಸಂತರು ಸ್ವಾಮೀಜಿಗಳು ದೇಶದ ಗಡಿಯೊಳಗೆ ಇರುವವರು ಮಾತ್ರವಲ್ಲದೇ ಇಡೀ ವಿಶ್ವವನ್ನೇ ಒಂದು ಕುಟುಂಬ ಎಂದಿದ್ದರು. ನಮ್ಮ ಹಿರಿಯವರು ಅದನ್ನು ವಸುದೈವ ಕುಟುಂಬಕಂ ಎಂದು ಕರೆದಿದ್ದಾರೆ. ಭಾರತೀಯರೇ ಈ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ" ಎಂದರು.