ಚಿಕ್ಕಮಗಳೂರು, ಜ.23 (Daijiworld News/PY) : ನೆರ ಪರಿಹಾರದ ವಿಚಾರದ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಕಂದಾಯ ಅಧಿಕಾರಿಯ ಕಪಾಳಕ್ಕೆ ಹೊಡೆದ ಘಟನೆ ಕಳಸದ ಹಿರೇಬೈಲ್ನಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ, ಮಳೆ ಹಾನಿಯಿಂದಾಗಿ ಆದ ರಸ್ತೆ ದುರಸ್ತಿ ಕಾರ್ಯದ ಬಿಲ್ ಪಾವತಿಸದ ವಿಚಾರವಾಗಿ ಜಿಲ್ಲಾಧಿಕಾರಿಯ ಬಳಿ ಸ್ಥಳೀಯರು ದೂರು ನೀಡಿದ್ದರು.
ಸರ್ಕಾರದಿಂದ ಹಣ ಬಂದಿದೆ ಯಾಕೆ ಪಾವತಿಸಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಕಂದಾಯ ಅಧಿಕಾರಿಯಾದ ಅಜ್ಜೇಗೌಡರನ್ನು ಕೇಳಿದ್ದಾರೆ. ಜಿಲ್ಲಾಧಿಕಾರಿ ಅವರು ಕೇಳಿದ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದೇ ಇದ್ದ ಸಂದರ್ಭ ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಸಾರ್ವಜನಿಕರ ಎದುರೇ ಕಂದಾಯ ಅಧಿಕಾರಿಯ ಕೆನ್ನೆಗೆ ಬಾರಿಸಿದ್ದಾರೆ.
ಬಿಲ್ ಪಾವತಿ ವಿಚಾರವಾಗಿ ಆರ್.ಐ. ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಯಿಂದ ಗೋಲ್ ಮಾಲ್ ನಡೆಯುತ್ತಿದೆ ಎಂದು ಕೇಳಿ ಬರುತ್ತಿದ್ದು, ಕಳೆದ ಒಂದು ವಾರದ ಹಿಂದ ಶಾಸಕ ಎಂ.ಪಿ. ಕುಮಾರ್ ಸ್ವಾಮಿ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು.