ಭುವನೇಶ್ವರ್, ಜ 24 (Daijiworld News/MB) : ಒಡಿಶಾದಲ್ಲಿ ಬೀದಿ ಆನೆಗಳ ದಾಳಿಗೆ ಇಬ್ಬರು ಮೃತಪಟ್ಟಿದ್ದು ಜಿಲ್ಲೆಯ 600ಕ್ಕೂ ಅಧಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಗುರುವಾರ ಸಂಜೆ ಬೀದಿ ಆನೆಗಳ ದಾಳಿಗೆ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೋರೈ, ದಾನ್ಗಾಡಿ ಮತ್ತು ಸುಕಿಂಡಾ ಬ್ಲಾಕ್ಸ್ ವ್ಯಾಪ್ತಿಯಲ್ಲಿರುವ ಸುಮಾರು 600ಕ್ಕೂ ಅಧಿಕ ಶಾಲೆಗಳಿಗೆ ಒಂದು ದಿನ ರಜೆ ಘೋಷಿಸಲಾಗಿದೆ ಎಂದು ಜೈಪುರ್ ಜಿಲ್ಲಾ ಶಿಕ್ಷಣಾಧಿಕಾರಿ ಕೃಷ್ಣಾ ಚಂದ್ರ ನಾಯಕ್ ತಿಳಿಸಿದ್ದಾರೆ.
ಜೈಪುರ ನಗರ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಆನೆಗಳ ಹಿಂಡು ಇದ್ದು ಅವರು ಯಾವ ಸಂದರ್ಭದಲ್ಲಿಯಾದರೂ ಬೀದಿಗಿಳಿಯವ ಸಾಧ್ಯತೆಯಿದೆ. ಆ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಆನೆ ದಾಳಿ ಮಾಡುವ ಆತಂಕದಿಂದ ಜಿಲ್ಲೆಯ ನೂರಾರು ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಆನೆ ದಾಳಿಗೆ ಜನರು ಬಲಿಯಾಗುವ ಘಟನೆ ಒಡಿಶಾದಲ್ಲಿ ಹೆಚ್ಚಾಗಿ ನಡೆಯುತ್ತಿದೆ.