ಚಿಕ್ಕಮಗಳೂರು, ಜ.24 (Daijiworld News/PY) : ಚಿಕ್ಕಮಗಳೂರಿನಲ್ಲಿ ಕೆಎಫ್ಡಿ ವೈರಸ್ ಪತ್ತೆಯಾಗಿದೆ. ಕೊಪ್ಪ ತಾಲೂಕಿನ ಜಯಪಪುರ ಸಮೀಪದ ಶಾಂತಿಗ್ರಾಮದಲ್ಲಿ ವೈರಸ್ ಪತ್ತೆಯಾಗಿದ್ದು, ಜನರು ಆತಂಕಗೊಂಡಿದ್ದಾರೆ.
ಪ್ರಾಣಿಗಳ ಉಣ್ಣೆಯಲ್ಲಿ ಪಾಸಿಟಿವ್ ಅಂಶ ಇದೆ ಎಂದು ಜ.9ರಂದು ಶಿವಮೊಗ್ಗ ಪ್ರಯೋಗಾಲಯ ಪತ್ತೆಹಚ್ಚಿದೆ. ಕಳೆದ ವರ್ಷದಲ್ಲಿ ಸುಮಾರು 35 ಮಂಗಗಳು ಸಾವನ್ನಪ್ಪಿದ್ದು, 18 ಮಂಗಗಳ ಅಂಗಾಗ ಪರೀಕ್ಷೆ ಮಾಡಿದ ಸಂದರ್ಭ ಒಂದು ಮಂಗನ ದೇಹದಲ್ಲಿ ಪಾಸಿಟಿವ್ ವೈರಸ್ ಪತ್ತೆಯಾಗಿತ್ತು ಎನ್ನಲಾಗಿದೆ. ಕೊಪ್ಪದ ಜಯಪುರದ ಹಾಡುಗಾರು ಗ್ರಾಮದಲ್ಲಿ ವ್ಯಕ್ತಿಯೋರ್ವನ ದೇಹದಲ್ಲೂ ಪಾಸಿಟಿವ್ ಅಂಶ ಪತ್ತೆಯಾಗಿತ್ತು ಎನ್ನಲಾಗಿದೆ.
ಕೆಎಫ್ಡಿ ವೈರಸ್ ಪತ್ತೆಯಾದ ಕಾರಣದಿಂದ ಸುರಕ್ಷತಾ ಕ್ರಮವಾಗಿ ವೈದ್ಯರ ತಂಡವು ಜನರಿಗೆ ಔಷಧಿ ನೀಡಲು ಮುಂದಾಗಿದ್ದು, ತರೀಕೆರೆ ಮೂಡಿಗೆರೆ ಕೊಪ್ಪ ತಾಲ್ಲೂಕಿನ ನೂರಾರು ಜನರಿಗೆ ಜಿಲ್ಲಾ ವಿಚಕ್ಷಣ ಅಧಿಕಾರಿ ಮಂಜುನಾಥ್ ನೇತೃತ್ವದ ತಂಡದಿಂದ ಔಷಧಿ ನೀಡಲಾಗುತ್ತಿದೆ. ಹಾಗೆಯೇ ಮಂಗನ ಕಾಯಿಲೆಯ ಬಗ್ಗೆ ಜನರಿಗೆ ಜಾಗೃತಿ ನೀಡಲಾಗುತ್ತಿದೆ.
ಮಂಗನ ಪತ್ತೆಯಾದ ಹಿನ್ನೆಲೆ ಪ್ರಯೋಗಾಲಯದಿಂದ ವರದಿ ಬಂದ ಬಳಿಕವಷ್ಟೆ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಗೊತ್ತಾಗಬೇಕಿದೆ.