ನವದೆಹಲಿ, ಜ.24 (Daijiworld News/PY) : ದೆಹಲಿಯಲ್ಲಿ ಫೆ.8ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಭಾರತ-ಪಾಕಿಸ್ತಾನದ ನಡುವಿನ ಸ್ಪರ್ಧೆ ಎಂದು ಹೇಳಿದ್ದ ಬಿಜೆಪಿ ನಾಯಕ ಕಪಿಲ್ ಅವರ ಟ್ವೀಟ್ ಕುರಿತು ದೆಹಲಿ ಮುಖ್ಯ ಚುನಾವಣಾಧಿಕಾರಿಗಳಿಂದ ಚುನಾವಣಾ ಆಯೋಗ ವರದಿ ಕೇಳಿದ್ದು, ಸರಣಿ ಟ್ವೀಟ್ಗಳನ್ನು ವೆಬ್ಸೈಟ್ನಿಂದ ಡಿಲೀಟ್ ಮಾಡುವಂತೆ ಚುನಾವಣೆ ಆಯೋಗ ಟ್ವಿಟರ್ ಮುಖ್ಯಸ್ಥರಿಗೆ ಮನವಿ ಮಾಡಿದೆ.
ದೆಹಲಿ ವಿಧಾನಸಭಾ ಚುನಾವಣೆಯಯ ಬಗ್ಗೆ ಟ್ವೀಟ್ ಮಾಡಿದ್ದ ಕಪಿಲ್ ಮಿಶ್ರಾ, ಫೆ.8ರಂದು ದೆಹಲಿಯ ರಸ್ತೆಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಸ್ಪರ್ಧೆ ನಡೆಯಲಿದೆ. ಪಾಕಿಸ್ತಾನ ಈಗಾಗಲೇ ಶಹೀನ್ ಬಾಗ್ ಪ್ರವೇಶಿಸಿದ್ದು, ಪಾಕಿಸ್ತಾನದ ಸಣ್ಣ ಪ್ರಾಂತ್ಯಗಳನ್ನು ದೆಹಲಿಯಲ್ಲಿ ರಚಿಸಲಾಗುತ್ತಿದೆ ಎಂದಿದ್ದರು.
ಈ ಹೇಳಿಕೆಯು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾಕ್ಕಾಗಿ ಕಪಿಲ್ ಮಿಶ್ರಾ ಅವರ ಪ್ರಚೋದನಾಕಾರಿ ಟ್ವೀಟ್ಗಾಗಿ ಶೋ-ಕಾಸ್ ನೋಟಿಸ್ ನೀಡಿದೆ.
ಕಪಿಲ್ ಮಿಶ್ರಾ ಮಾಡಿರುವ ಟ್ವೀಟ್ 'ಅತ್ಯಂತ ಆಕ್ಷೇಪಾರ್ಹ' ಟ್ವೀಟ್ ಎಂದು ಹೇಳಿದ್ದು, ಚುನಾವಣಾ ನೀತಿ ಸಂಹಿತೆಯ 1(3) ಪ್ರಕಾರ ಇಂತಹ ಟ್ವೀಟ್ಗಳು ನಿಷಿದ್ಧ, ಈ ಟ್ವೀಟ್ ಕೋಮುಭಾವನೆಗಳಿಗೆ ಧಕ್ಕೆ ತರುವಂತದ್ದು, ದಯವಿಟ್ಟು ಇದರ ವಿರುದ್ಧ ಕ್ರಮ ಕೈಗೊಳ್ಳಿ ಹಾಗೂ ತೆಗೆದುಕೊಂಡ ಕ್ರಮವನ್ನು ಆಯುಕ್ತರಿಗೆ ತಿಳಿಸಿ ಎಂದು ಚುನಾವಣಾ ಆಯೋಗ ತಿಳಿಸಿದೆ.
ಟ್ವೀಟ್ ಸಂಬಂಧ ದೆಹಲಿ ಮುಖ್ಯ ಚುನಾವಣಾಧಿಕಾರಿ ಮುಖ್ಯಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿ ಟ್ವೀಟ್ ತೆಗೆದುಹಾಕಲು ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಿ ಎಂದು ತಿಳಿಸಿತ್ತು.
ಸಿಎಎ ವಿರೋಧಿಸಿ ದೆಹಲಿಯ ಶಹೀನ್ ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ದ ಆಕ್ರೋಶಗೊಂಡ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಫೆ.8ರಂದು ನಡೆಯಲಿರುವ ಚುನಾವಣೆಯು ದೆಹಲಿ ರಸ್ತೆಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಪರ್ಧೆಯಾಗಲಿದೆ ಎಂದಿದ್ದರು. ಇನ್ನೊಂದು ಟ್ವೀಟ್ನಲ್ಲಿ. ಪಾಕಿಸ್ತಾನ ಈಗಾಗಲೇ ಶಹೀನ್ ಬಾಗ್ ಪ್ರವೇಶಿಸಿದ್ದು, ದೆಹಲಿಯಲ್ಲಿ ಸಣ್ಣ ಪಾಕಿಸ್ತಾನದ ಪ್ರಾಂತ್ಯಗಳನ್ನು ರಚಿಸಲಾಗುತ್ತಿದೆ. ಭಾರತದ ಕಾನೂನುಗಳನ್ನು ಶಹೀನ್ ಬಾಗ್ ಹಾಗೂ ಚಾಂದ್ಬಾಗ್ನಲ್ಲಿ ಪಾವತಿಸಲಾಗುತ್ತಿಲ್ಲ ಎಂದಿದ್ದರು.
ಕಪಿಲ್ ಮಿಶ್ರಾ ಅವರು ಎಎಪಿ ಸರ್ಕಾರದಲ್ಲಿ ಸಚಿವರಾಗಿದ್ದರು.ಬಳಿಕ ಪಕ್ಷ ತೊರೆದು ಬಿಜೆಪಿಗೆ ಸೇರಿದ್ದರು. ಪ್ರಸ್ತುತ ಮಾಡೆಲ್ ಟೌನ್ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.