ಬೆಂಗಳೂರು, ಜ 24 (Daijiworld News/MSP): "ಹಿಂದಿನ ಸರ್ಕಾರವು ನಮ್ಮ ನಡುವೆ ಇರುವ ಸಮಾಜಘಾತುಕ ಶಕ್ತಿಗೆ ಕಡಿವಾಣ ಹಾಕುವುದನ್ನು ಬಿಟ್ಟು ಪ್ರೋತ್ಸಾಹ ಕೊಟ್ಟಿರುವುದೇ ನಾವು ಇಂದು ಎದುರಿಸುತ್ತಿರುವ ಪರಿಸ್ಥಿತಿಗೆ ಕಾರಣ ಎಂಬ ಉಪಮುಖ್ಯಮಂತ್ರಿ ಡಾ| ಅಶ್ವಥ್ ನಾರಾಯಣ ಅವರ ಹೇಳಿಕೆಗೆ ಕಾಂಗ್ರೆಸ್ ಪಕ್ಷ ಕೌಂಟರ್ ಕೊಟ್ಟಿದ್ದು ಉಪಮುಖ್ಯಮಂತ್ರಿಯವರನ್ನು "ಅಸ್ವಸ್ಥ ನಾರಾಯಣ" ಎಂದು ಕರೆದಿದೆ.
ಈ ಬಗ್ಗೆ ಕಾಂಗ್ರೆಸ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ, "ಅಶ್ವಥ್ ನಾರಾಯಣರವರೇ..ಜನ ನಿಮ್ಮನ್ನ "ಅಸ್ವಸ್ಥ ನಾರಾಯಣ"ಎಂದು ಕರೆಯುತ್ತಿದ್ದಾರೆ... ಉಪಮುಖ್ಯಮಂತ್ರಿ ಹುದ್ದೆಯ ಘನತೆಯನ್ನ ಕಾಪಾಡುವುದು ಬಹಳ ಮುಖ್ಯ,ಹಾಗಾಗಿ ನಿಮ್ಮ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಕಾಳಜಿ ವಹಿಸಿ ಎಂದು ವಿನಂತಿಸಿಕೊಳ್ಳುತ್ತೇವೆ " ಎಂದು ಸಲಹೆ ನೀಡಿದೆ.
ಮಂಗಳೂರು ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ , ಡಿಸಿಎಂ ಅಶ್ವಥ್ ನಾರಾಯಣ ಆವರು" ಇಂದಿನ ಈ ಪರಿಸ್ಥಿತಿಗೆ ಹಿಂದಿನ ಸರ್ಕಾರ ಕಾರಣವಾಗಿದ್ದು, ಈ ಹಿಂದೆ ಇದ್ದ ಸರ್ಕಾರವು ನಮ್ಮ ನಡುವೆ ಇರುವ ಸಮಾಜಘಾತುಕ ಶಕ್ತಿಗೆ ಕಡಿವಾಣ ಹಾಕುವುದನ್ನು ಬಿಟ್ಟು ಪ್ರೋತ್ಸಾಹ ಕೊಟ್ಟಿದ್ದಾರೆ. ಸಮಾಜಘಾತುಕರ ಮೇಲಿನ ಕೇಸ್ ಹಿಂಪಡೆದಿದ್ದರಿಂದಲೇ ಅವರೆಲ್ಲರೂ ಕಾನೂನು ಮೀರಿ ದೊಡ್ಡ ಶಕ್ತಿಯಾಗಿ ನಿಂತಿದ್ದಾರೆ. ಹಾಗಾಗಿ ರಾಜ್ಯದಲ್ಲಿ ಇಂದು ಈ ಪರಿಸ್ಥಿತಿ ಸೃಷ್ಟಿಯಾಗಿದೆ. ನಮ್ಮ ಸರ್ಕಾರ ಎಲ್ಲವನ್ನು ನಿಯಂತ್ರಣ ಮಾಡುವ ಪ್ರಯತ್ನ ಮಾಡುತ್ತಿದೆ ಎಂದಿದ್ದರು.