ಮುಂಬೈ, ಜ 24 (Daijiworld News/MB) : ಚೀನಾ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಜನರ ಸಾವಿಗೆ ಕಾರಣವಾಗುತ್ತಿರುವ ಕೊರೋನೊ ವೈರಸ್ ಭಾರತದಲ್ಲಿ ವ್ಯಾಪಿಸದಂತೆ ಮುನ್ನೆಚ್ಚರಿಕೆಯಾಗಿ ಚೀನಾದಿಂದ ಮುಂಬೈಗೆ ವಾಪಾಸಗಿರುವ ಇಬ್ಬರು ವ್ಯಕ್ತಿಗಳನ್ನು ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ ಎಂದು ಬಿಎಂಸಿ ಆರೋಗ್ಯಾಧಿಕಾರಿ ಶುಕ್ರವಾರ ತಿಳಿಸಿದ್ದಾರೆ.
ಚೀನಾದಲ್ಲಿ ಕೊರೋನೊ ವೈರಸ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ಮುಂಬೈನ ಆಸ್ಪತ್ರೆಯಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಪ್ರತ್ಯೇಕ ವಾರ್ಡ್ನ್ನು ತೆರೆದಿದ್ದು, ವ್ಯಕ್ತಿಗೆ ಕೊರೋನಾ ವೈರಸ್ ಇರುವ ಶಂಕೆಯಿಂದ ವ್ಯಕ್ತಿಯ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ ಎಂದು ಬಿಎಂಸಿ ಆರೋಗ್ಯಾಧಿಕಾರಿ ಡಾ.ಪದ್ಮಜಾ ಕೇಸ್ಕರ್ ಹೇಳಿದ್ದಾರೆ.
ಹಾಗೆಯೇ ಮುಂಬೈ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚೀನಾದಿಂದ ಬರುವವರಲ್ಲಿ ಕೊರೋನಾ ವೈರಸ್ ಇರುವ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಅವರನ್ನು ಪ್ರತ್ಯೇಕ ವಾರ್ಡ್ನಲ್ಲಿ ದಾಖಲು ಮಾಡಲು ವೈದ್ಯರಿಗೆ ಸೂಚನೆ ನೀಡಿದ್ದೇವೆ. ಸ್ವಲ್ಪ ಕಫ ಹಾಗೂ ಶೀತ ಸಂಬಂಧಿ ಸಮಸ್ಯೆಯಿದ್ದ ಚೀನಾದಿಂದ ಬಂದಿರುವ ಇಬ್ಬರು ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.