ಜಮ್ಮು-ಕಾಶ್ಮೀರ, ಜ 24 (Daijiworld News/MB) : ಉಗ್ರರ ಹಾಗೂ ಭದ್ರತಾ ಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ನ ಮುಖಂಡ ಮೃತಪಟ್ಟಿದ್ದು ಹಲವು ಯೋಧರು ಗಾಯಗೊಂಡ ಘಟನೆ ಶುಕ್ರವಾರ ನಸುಕಿನ ವೇಳೆ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಪುಲ್ವಾಮಾದ ಝೈನ್ ಟ್ರಾಗ್ ಗ್ರಾಮದಲ್ಲಿ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಉಗ್ರರು ಇದ್ದಾರೆ ಎಂದು ಖಚಿತ ಮಾಹಿತಿ ಲಭಿಸಿದ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ್ದು ಆದರೆ ಈ ಶೋಧ ಕಾರ್ಯಾಚರಣೆಯ ಸುಳಿವು ದೊರೆತ ಉಗ್ರರು ಅಲ್ಲಿಂದ ಪರಾರಿಯಾಗಿದ್ದರು.
ಭದ್ರತಾ ಪಡೆಗಳು ಶೋಧ ಕಾರ್ಯ ಮುಂದುವರಿಸಿದ್ದು ನಾಗನ್ದರ್ ಪ್ರದೇಶದ ಅರಣ್ಯದಲ್ಲಿ ಉಗ್ರರು ಇರುವುದನ್ನು ಪತ್ತೆ ಹಚ್ಚಿದ್ದು ಈ ಸಂದರ್ಭದಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಈ ಗುಂಡಿನ ದಾಳಿಯಿಂದಾಗಿ ಜೈಶ್ ಮುಖಂಡ ಸಾವನ್ನಪ್ಪಿದ್ದಾನೆ.
ಮೃತ ಉಗ್ರನನ್ನು ವಿದೇಶಿ ಉಗ್ರ ಅಬು ಸೈಫುಲ್ಲಾ ಅಲಿಯಾಸ್ ಅಬು ಖ್ವಾಸಿಂ ಎಂದು ಗುರುತಿಸಲಾಗಿದ್ದು ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಉಗ್ರರಿಗಾಗಿ ಶೋಧ ಕಾರ್ಯಾ ಮುಂದುವರಿದಿದೆ.