ಜಾರ್ಖಂಡ್, ಜ 25 (Daijiworld News/MSP): ಇಲ್ಲಿನ ಬೊಕರೊದ ಗೊಮೇನಿಯಾ ಪ್ರದೇಶದಲ್ಲಿ ನಕ್ಸಲ್ಗಳ ಗುಂಪೊಂದು ರಸ್ತೆ ಕಾಮಗಾರಿ ನೋಡಿಕೊಳ್ಳುತ್ತಿದ್ದ ಮೇಲ್ವಿಚಾರಕನನ್ನು ಬರ್ಬರವಾಗಿ ಹತ್ಯೆ ನಡೆಸಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಜೆಸಿಬಿ ಯಂತ್ರಕ್ಕೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
"ಗೋಮಿಯಾ ಮತ್ತು ಟುತಿಜರ್ನಾ ಗ್ರಾಮಗಳ ನಡುವೆ ನಡೆಯುತ್ತ ಕಾಮಗಾರಿ ವೇಳೆ ಈ ಘಟನೆ ನಡೆದಿದ್ದು, ಪ್ರಧಾನಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎಂದು ಪೊಲೀಸ್ ಅಧಿಕಾರಿ ಎಸ್ಎಸ್ಪಿ ಉಮೇಶ್ ಕುಮಾರ್ ಸಾಹು ಶುಕ್ರವಾರ ಹೇಳಿದ್ದಾರೆ.
ನಕ್ಸಲ್ ದಾಳಿಯ ಬಗ್ಗೆ ಮಾಹಿತಿ ಪಡೆದ ಕೆಲವೇ ನಿಮಿಷಗಳಲ್ಲಿ, ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ