ಬೆಂಗಳೂರು, ಜ 25 (Dajiworld News/MB) : ಅಕ್ರಮವಾಗಿ ಭಾರತದಲ್ಲಿ ವಾಸ ಮಾಡುತ್ತಿದ್ದ ಬಾಂಗ್ಲಾ ದೇಶದ ಮಹಿಳೆಯೋರ್ವಳನ್ನು ಪೊಲೀಸರು ಬಂಧನ ಮಾಡಿದ ಘಟನೆ ಕಾಡುಬೀಸನಹಳ್ಳಿಯಲ್ಲಿ ನಡೆದಿದೆ.
ಬಂಧಿತ ಮಹಿಳೆ ನರ್ಗೀಸ್ ಬೇಗಂ (45) ಬಾಂಗ್ಲಾ ದೇಶದವಳಾಗಿದ್ದು ಕಾಡುಬೀಸನಹಳ್ಳಿ ಸಮೀಪ ಅಕ್ರಮವಾಗಿ ವಾಸವಿದ್ದಳು.
ನರ್ಗೀಸ್ ಬಾಂಗ್ಲಾದೇಶದ ಬಾಗೇರ್ಹಟ್ ಜಿಲ್ಲೆಯವಳಾಗಿದ್ದು ಕೆಲವು ವರ್ಷಗಳ ಹಿಂದೆ ನಗರಕ್ಕೆ ಆಗಮಿಸಿದ್ದಳು. ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಖಾಲಿ ಜಾಗದಲ್ಲಿ ನಿರ್ಮಿಸಿದ್ದ ಜೋಪಡಿಯೊಂದರಲ್ಲಿ ಉಳಿದುಕೊಂಡಿದ್ದಳು.
ಈ ಕುರಿತು ಸ್ಥಳೀಯರೋರ್ವರು ನೀಡಿದ ಮಾಹಿತಿಯಂತೆ ದಾಳಿ ಮಾಡಿ ಪರಿಶೀಲನೆ ಮಾಡಿದ ಪೊಲೀಸರು ಆಕೆ ಬಾಂಗ್ಲಾದವಳಾಗಿದ್ದು ಇಲ್ಲಿ ಅಕ್ರಮವಾಗಿ ನೆಲೆಸಿದ್ದಾಳೆ ಎಂದು ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಆಕೆಯನ್ನು ಬಂಧನ ಮಾಡಲಾಗಿದೆ.
ಬಂಧಿತ ಮಹಿಳೆಯೇ ತಾನು ಬಾಂಗ್ಲಾ ದೇಶದ ಪ್ರಜೆ ಎಂದು ಒಪ್ಪಿಕೊಂಡಿದ್ದು ಅಕ್ರಮವಾಗಿ ಗಡಿ ದಾಟಿ ರೈಲಿನ ಮೂಲಕ ಬೆಂಗಳೂರಿಗೆ ಬಂದಿರುವುದಾಗಿ ತಿಳಿಸಿದ್ದಾಳೆ.