ಮಂಡ್ಯ, ಜ 25 (Dajiworld News/MB) : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮಂಡ್ಯದ ಗಂಡು. ಕೊಟ್ಟ ಮಾತಿಗೆ ತಪ್ಪುವವರು ಅವರಲ್ಲ. ಕಾಂಗ್ರೆಸ್ ಜೆಡಿಎಸ್ನಿಂದ ಬಿಜೆಪಿಗೆ ಹೋದ ಎಲ್ಲಾ 17 ಜನರನ್ನೂ ಮಂತ್ರಿ ಮಾಡೇ ಮಾಡ್ತಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ವ್ಯಂಗ್ಯ ಮಾಡಿದ್ದಾರೆ.
ಮಂಡ್ಯದಲ್ಲಿ ಬಿಜೆಪಿಯಲ್ಲಿ ಗೆದ್ದ ಶಾಸಕರಿಗೆ ಮಾತ್ರ ಮಂತ್ರಿಸ್ಥಾನ ಸೋತವರಿಗಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ಈ ಹಿಂದೆ ನಾವು ಯಡಿಯೂರಪ್ಪ ಅವರಿಗೆ ಅಧಿಕಾರ ನೀಡದೆ ಕೊಟ್ಟ ಮಾತಿಗೆ ತಪ್ಪಿದ್ದೇವೆ ಎಂದು ಜೆಡಿಎಸ್ನ್ನು ಟೀಕೆ ಮಾಡುತ್ತಿದ್ದರು. ಈಗ ಅವರು ಆ ರೀತಿ ಟೀಕೆ ಮಾಡಿಸಿಕೊಳ್ಳಲ್ಲಪ್ಪ ಎಂದು ಟಾಂಗ್ ನೀಡಿದ್ದಾರೆ.
ಅವರು ನಮ್ಮ ಮಂಡ್ಯದ ಗಂಡು, ಎಂದಿಗೂ ಮಾತು ತಪ್ಪಲ್ಲ. ಎಲ್ಲಾ 17 ಜನರಿಗೂ ಸಚಿವ ಸ್ಥಾನ ಕೊಡ್ತಾರೆ. ಎಂದೂ ಸಹ ಮಾತಿಗೆ ತಪ್ಪಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.