ಬೆಂಗಳೂರು, ಜ.25 (Daijiworld News/PY) : ಅಕ್ಷರ ಸಂತ ಎಂದೇ ಖ್ಯಾತರಾಗಿರುವ ಹರೇಕಳ ಹಾಜಬ್ಬ ಹಾಗೂ ಹಾಲಕ್ಕಿ ಸಮುದಾಯದ ತುಳಸಿ ಗೌಡ ಸೇರಿದಂತೆ 21 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
ಹಾಜಬ್ಬ ಅವರು ಕಳೆದ 20 ವರ್ಷಗಳಿಂದ ದಕ್ಷಿಣ ಕನ್ನಡದ ಕೊಣಾಜೆ ಸಮೀಪದ ಹರೇಕಳ ನ್ಯೂ ಪಡ್ಪು ಗ್ರಾಮದಲ್ಲಿ ಬಡ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದಾರೆ. ತನಗಿಲ್ಲದ ಶಿಕ್ಷಣ ತನ್ನ ಊರಿನ ಮಕ್ಕಳಿಗೆ ದೊರಕಬೇಕು ಎನ್ನುವ ಆಶಯದಿಂದ ಕಿತ್ತಳೆ ಮಾರಿ ಜೀವನ ಸಾಗಿಸಿ ಉಳಿದ ಹಣದಿಂದಲೇ ಅಂಗನವಾಡಿ ಆರಂಭಿಸುವ ಮೂಲಕ ಶಿಕ್ಷಣ ನೀಡುತ್ತಿದ್ದಾರೆ.
2004ರಲ್ಲಿ ಕನ್ನಡ ಪತ್ರಿಕೆಯೊಂದು ಹಾಜಬ್ಬರನ್ನು `ವರ್ಷದ ವ್ಯಕ್ತಿ’ ಎಂದು ಪ್ರಶಸ್ತಿ ನೀಡಿ ಗುರುತಿಸುವ ಮೂಲಕ ಹಾಜಬ್ಬ ಬೆಳಕಿಗೆ ಬಂದಿದ್ದರು. ಬಳಿಕ ದೆಹಲಿಯ ಸಿಎನ್ಎನ್-ಐಬಿಎನ್ `ರಿಯಲ್ ಹೀರೋ’ ಪ್ರಶಸ್ತಿ ನೀಡಿ ಗೌರವಿಸಿತ್ತು.
- ಹರೇಕಳ ಹಾಜಬ್ಬ ಅವರು ದಕ್ಷಿಣ ಕನ್ನಡ ಜಿಲ್ಲೆ - ಸಮಾಜಸೇವೆ (ಶಿಕ್ಷಣ) ಕ್ಷೇತ್ರ
- ಉತ್ತರ ಕನ್ನಡ ಜಿಲ್ಲೆಯವರಾದ ತುಳಸಿ ಗೌಡ - ಸಮಾಜ ಸೇವೆ (ಪರಿಸರ) ಕ್ಷೇತ್ರ
ಪ್ರಶಸ್ತಿಗೆ ಆಯ್ಕೆಯಾದ ಇತರರು
- ಜಗದೀಶ್ ಲಾಲ್ ಅಹುಜಾ ಸಮಾಜಸೇವೆ (ಸೇವೆ - ಪಂಜಾಬ್
- ಮೊಹಮ್ಮದ್ ಶರೀಫ್ - ಸಮಾಜಸೇವೆ (ಸೇವೆ) - ಉತ್ತರ ಪ್ರದೇಶ
- ಜಾವೇದ್ ಅಹ್ಮದ್ ತಕ್ - ಸಮಾಜಸೇವೆ(ಅಂಗವಿಕಲರಕಲ್ಯಾಣ)ಜಮ್ಮು- ಕಾಶ್ಮೀರ
- ಸತ್ಯನಾರಾಯಣ್ ಮುಂದಯೂರ್ -ಸಮಾಜಸೇವೆ (ಶಿಕ್ಷಣ) - ಅರುಣಾಚಲ
- ಪ್ರದೇಶ ಅಬ್ದುಲ್ ಜಬ್ಬಾರ್ - ಸಮಾಜಸೇವೆ (ಸೇವೆ) - ಮಧ್ಯ ಪ್ರದೇಶ
- ಉಶಾ ಚುಮಾರ್ - ಸಮಾಜಸೇವೆ (ನೈರ್ಮಲ್ಯ) - ರಾಜಸ್ತಾನ
- ಪೋಪಟ್ರಾವ್ ಪವಾರ್ - ಸಮಾಜಸೇವೆ (ನೀರಾವರಿ) - ಮಹಾರಾಷ್ಟ್ರ
- ಅರುಣೋದಯ್ ಮೊಂಡಲ್- ಆರೋಗ್ಯ - ಪಶ್ಚಿಮ ಬಂಗಾಳ
- ರಾಧಾಮೋಹನ್ ಮತ್ತು ಸಬರ್ಮತಿ - ಸಾವಯವ ಕೃಷಿ - ಒಡಿಶಾ
- ಕುಶಾಲ್ ಕೊನ್ವಾರ್ ಶರ್ಮಾ - ಪಶುವೈದ್ಯಕೀಯ - ಅಸ್ಸಾಂ
- ಟ್ರಿನಿಟಿ ಸೈಯೂ - ಸಾವಯವ ಕೃಷಿ - ಮೇಘಾಲಯ
- ರವಿ ಕಣ್ಣನ್ - ವೈದ್ಯಕೀಯ (ಗ್ರಂಥಶಾಸ್ತ್ರ)- ಅಸ್ಸಾಂ
- ಎಸ್. ರಾಮಕೃಷ್ಣನ್ - ಸಮಾಜಸೇವೆ (ಅಂಗವಿಕಲರ ಕಲ್ಯಾಣ) - ತಮಿಳುನಾಡು
- ಸುಂದರಂ ವರ್ಮಾ - ಸಮಾಜಸೇವೆ (ಪರಿಸರ ಮತ್ತು ಅರಣ್ಯೀಕರಣ)- ರಾಜಸ್ತಾನ
- ಮುನ್ನಾ ಮಾಸ್ಟರ್ - ಕಲೆ (ಭಜನ್) - ರಾಜಸ್ತಾನ
- ಯೋಗಿ ಏರಾನ್ - ವೈದ್ಯಕೀಯ - ಉತ್ತರಾಖಂಡ
- ರಹೀಬಾಯಿ ಸೋಮಾ ಪೋಪರೆ - ಸಾವಯವ ಕೃಷಿ - ಮಹಾರಾಷ್ಟ್ರ
- ಹಿಮ್ಮತ್ ರಾಮ್ ಭಾಂಭೂ - ಸಮಾಜಸೇವೆ (ಪರಿಸರ) - ರಾಜಸ್ತಾನ
- ಮೂಜಿಕ್ಕಲ್ ಪಂಕಜಾಕ್ಞಿ- ಕಲೆ - ಕೇರಳ