ಅಸ್ಸಾಂ, ಜ.26 (Daijiworld News/PY) : ದೇಶದಾತ್ಯಂತ 71ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ನಡುವೆಯೇ ಅಸ್ಸಾಂ ಧಿಬ್ರು ಗಡ್ ಪ್ರದೇಶದಲ್ಲಿ 2 ಬಾಂಬ್ ಸ್ಪೋಟಗೊಂಡಿದೆ ಎಂದು ವರದಿಯಾಗಿದೆ.
ಅಸ್ಸಾಂನ ರಾಷ್ಟ್ರೀಯ ಹೆದ್ದಾರಿ 37ರ ಬಳಿಯಿರುವ ಗ್ರಹಮ್ ಬಜಾರ್ ಹಾಗೂ ಗುರುದ್ವಾರದ ಧಿಬ್ರುಗಡ್ ಪ್ರದೇಶದಲ್ಲಿ ಸ್ಪೋಟ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಬಾಂಬ್ ನಿಗ್ರಹ ದಳ, ಪೊಲೀಸರು ಬಂದು ತನಿಖೆ ಆರಂಭಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿರುವುದಾಗಿ ವರದಿಯಾಗಿಲ್ಲ.
ಘಟನೆಯ ವಿಚಾರವಾಗಿ ಹೇಳಿಕೆ ನೀಡಿದ ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತಿ ಅವರು, ಧಿಬ್ರುಗಢ್ ಪ್ರದೇಶದಲ್ಲಿ ಸ್ಪೋಟವಾಗಿರುವ ಮಾಹಿತಿ ಬಂದಿದ್ದು ತನಿಖೆ ಆರಂಭವಾಗಿದೆ. ಯಾರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬುವುದನ್ನು ತಕ್ಷಣವೇ ಪತ್ತೆಹಚ್ಚಲಾಗುವುದು ಎಂದು ಹೇಳಿದ್ದಾರೆ.