ಇಂದೋರ್, ಜ 26 (Dajiworld News/MB) : ಇಂದೋರ್ನಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿ ಗಾಂಧಿ ಭವನದಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಎಲ್ಲ ಸಿದ್ಧತೆಗಳು ನಡೆದಿದ್ದು ಇನ್ನೇನು ಧ್ವಜಾರೋಹಣ ಮಾಡಲಿದ್ದ ವೇಳೆ ಕಾಂಗ್ರೆಸ್ನ ಇಬ್ಬರು ನಾಯಕರು ಬಡಿದಾಡಿಕೊಂಡಿದ್ದಾರೆ.
ಧ್ವಜಾರೋಹಣ ಮಾಡಲು ಮುಖ್ಯಮಂತ್ರಿ ಕಮಲ್ನಾಥ್ಗಾಗಿ ಕಾಯುತ್ತಿದ್ದ ವೇಳೆ ದೇವೇಂದ್ರ ಸಿಂಗ್ ಯಾದವ್ ಮತ್ತು ಚಂದ್ರು ಕುಂಜಿರ್ ಎಂಬ ನಾಯಕರು ಬಡಿದಾಡಿಕೊಳ್ಳುವ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು ಈಗ ಅದು ವೈರಲ್ ಆಗಿದೆ.
ಇಬ್ಬರು ಬಡಿದಾಟ ಶುರು ಮಾಡಿದಾಗ ಕೂಡಲೇ ಅಲ್ಲಿದ್ದ ಪೊಲೀಸ್ ಅಧಿಕಾರಿ ಮತ್ತು ಕಾರ್ಯಕರ್ತರು ಮಧ್ಯ ಪ್ರವೇಶಿಸಿ ಇಬ್ಬರನ್ನೂ ದೂರ ಸರಿಸಿದ್ದು ಯಾವ ಕಾರಣದಿಂದ ಬಡಿದಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿಲ್ಲ. ಆದರೆ ಅವರು ಬಡಿದಾಡಿಕೊಳ್ಳುವ ಮುನ್ನ ಮಾತಿಗಿಳಿದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.