ಒಡಿಶಾ, ಜ.26 (Daijiworld News/PY) : ಇಬ್ಬರು ಮಾವೋವಾದಿ ಉಗ್ರನ್ನು ಕಲ್ಲಿನಿಂದ ಹೊಡೆದು ಗಾಯಗೊಳಿಸಿ ಹತ್ಯೆ ಮಾಡಿರುವ ಘಟನೆ ಮಲ್ಕನಗಿರಿ ಜಿಲ್ಲೆಯಲ್ಲಿನ ಜಂತುರಯ್ ಎಂಬ ಗ್ರಾಮದಲ್ಲಿ ನಡೆದಿದೆ.
ಗ್ರಾಮಕ್ಕೆ ಬಂದ ಇಬ್ಬರು ಮಾವೋವಾದಿ ಉಗ್ರರು ಸ್ಥಳೀಯರನ್ನು ಗಣರಾಜ್ಯೋತ್ಸವ ಆಚರಿಸದಂತೆ ಬೆದರಿಸಿದ್ದು ಅಲ್ಲದೇ ರಸ್ತೆ ಕಾಮಗಾರಿ ನಡೆಯುವುದನ್ನು ವಿರೋಧಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಇಬ್ಬರು ಮಾವೋವಾದಿ ಉಗ್ರರು ಗ್ರಾಮದ ಜನರತ್ತ ಬಂದೂಕಿನಿಂದ ಗುಂಡು ಹಾರಿಸಿದ್ದರು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಇಬ್ಬರತ್ತ ಕಲ್ಲು ಎಸೆದಿದ್ದಾರೆ. ಕಲ್ಲು ಎಸೆದ ಪರಿಣಾಮ ತೀವ್ರ ಗಾಯಗೊಂಡ ಉಗ್ರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.