ದಾವಣಗೆರೆ, ಜ 27 (Daijiworld News/MSP): ಮಂಗಳೂರು ಇರುವುದು ಭಾರತದ ರಿಪಬ್ಲಿಕ್ ನಲ್ಲಿ ಅಲ್ಲ . ಅದು ಇರುವುದು "ಕಲ್ಲಡ್ಕ ರಿಪಬ್ಲಿಕ್" ನಲ್ಲಿ. ಅಲ್ಲಿ ನಡೆಯುವುದು ಕಲ್ಲಡ್ಕ ಪ್ರಭಾಕರ ಭಟ್ಟರ ಕಾಯ್ದೆ ಮತ್ತು ಕಾನೂನು ಎಂದು ಚಿಂತಕ ಶಿವಸುಂದರ್ ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಪ್ರಭಾಕರ ಭಟ್ಟರು ಹೇಳಿದ್ರೆ ಗೋಲಿಬಾರ್ ಮಾಡುತ್ತಾರೆ ಅವರು ಹೇಳಿದಂತೆ ಬಾಂಬೆ ಬಾಂಬೆ ಅವನಿಗೆ ಜನಿವಾರ ಇದ್ದರೆ ಅಸ್ವಸ್ಥ, ಗಡ್ಡ ಬಿಟ್ಟಿದ್ದಾರೆ ಅಂತರಾಷ್ಟ್ರೀಯ ಭಯೋತ್ಪಾದಕ ಎಂದು ಮಾಡುತ್ತಾರೆ.
ಸಿಎಎ ವಿರುದ್ಧ ಮುಸ್ಲಿಮರು ಹೋರಾಟ ಮಾಡಿದರೆ ಮುಸ್ಲಿಮರು ಮತ್ತೊಮ್ಮೆ ಭಾರತದ ವಿರುದ್ಧ ಆಕ್ರಮಣ ಮಾಡುತ್ತಿದ್ದಾರೆ ಎಂದು ಹಿಂದೂಗಳಲ್ಲಿ ಭ್ರಮೆ ಹುಟ್ಟಿಸುತ್ತಿದ್ದಾರೆ ಆದರೆ ಪೌರತ್ವ ತಿದ್ದುಪಡಿ ಕಾಯ್ದೆ ಏನಾದರೂ ಮಗಳ ಬಡಜನರ ವಿರುದ್ಧ ಸಾರಿದ ಸಮರವಿದು ಕಾಗದಪತ್ರಗಳು ಇಲ್ಲದೆ ಇದ್ದರು ದುಡಿಸಿಕೊಂಡು ಬದುಕುತ್ತಿದ್ದ ಜನರ ವಿರುದ್ಧ ನಡೆಸಿದ ಸಂಚು ಇದು ಇದನ್ನು ನಾವೆಲ್ಲರೂ ಒಗ್ಗಟ್ಟಾಗಿ ಸೋಲಿಸಬೇಕು ಎಂದು ಹೇಳಿದರು.