ಜೈಪುರ, ಜ.27 (Daijiworld News/PY) : "ಸಿಎಎ ಜಾರಿಯು ಎನ್ಪಿಆರ್ ಹಾಗೂ ಎನ್ಆರ್ಸಿ ಜಾರಿಗೆ ಕಾರಣವಾದರೆ ಅದು ಮೊಹಮ್ಮದ್ ಅಲಿ ಜಿನ್ನಾ ಪರಿಕಲ್ಪನೆಗೆ ಪೂರ್ತಿ ಗೆಲುವು ಸಿಕ್ಕಿದಂತೆ" ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಜೈಪುರ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು, "ದೇಶದಲ್ಲಿ ಸಿಎಎ ಜಾರಿಯೊಂದಿಗೆ ಜಿನ್ನಾ ಅವರ ಕಲ್ಪನೆ ಸಾಕಾರಗೊಳ್ಳುತ್ತಿದೆ. ಜಿನ್ನಾ ಪೂರ್ಣವಾಗಿ ಜಯಗಳಿಸಿದ್ದಾರೆ ಎಂದು ನಾನು ಹೇಳುವುದಿಲ್ಲ. ಆದರೆ, ಅವರ ಕಲ್ಪನೆಗೆ ಗೆಲುವಾಗುತ್ತಿದೆ. ದೇಶದಲ್ಲಿ ಇನ್ನೂ ಆಯ್ಕೆಗಳಿವೆ. ಜಿನ್ನಾ ಅವರ ರಾಷ್ಟ್ರೀಯ ಪರಿಕಲ್ಪನೆ ಹಾಗೂ ಗಾಂಧೀಜಿ ಅವರ ರಾಷ್ಟ್ರೀಯ ಪರಿಕಲ್ಪನೆ" ಎಂದು ಹೇಳಿದ್ದಾರೆ.
ಟೆನಿಸ್ ಆಟದ ನಮೂನೆಯಲ್ಲಿ ವಿಮರ್ಶಿಸುವುದಾದರೆ, "ಜಿನ್ನಾ ಪರಿಕಲ್ಪನೆಗೆ ಮೊದಲ ಸೆಟ್ ಮುನ್ನಡೆ ಸಿಕ್ಕಿದೆ ಎನ್ನಬಹುದು. ಸಿಎಎ ಜಾರಿಯು ಎನ್ಪಿಆರ್ ಹಾಗೂ ಎನ್ಆರ್ಸಿ ಜಾರಿಗೆ ಕಾರಣವಾದರೆ ಅದು ಮುಂದಿನ ಹಂತವಾಗಿರಲಿದೆ. ಇದು ನಿಜವಾಗಿ ಅಗಿದ್ದೇ ಆದಲ್ಲಿ ಜಿನ್ನಾ ಪರಿಕಲ್ಪನೆಗೆ ಸಂಪೂರ್ಣ ಗೆಲುವು ದೊರೆತಂತೆ" ಎಂದು ತಿಳಿಸಿದ್ಧಾರೆ.