ನವದೆಹಲಿ, ಜ.27 (Daijiworld News/PY) : ಇಸ್ಲಾಂನಲ್ಲಿರುವ ಬಹುಪತ್ನಿತ್ವ ಹಾಗೂ ನಿಖಾ ಹಲಾಲ್ ಅನ್ನು ನಿಷೇಧಿಸಿಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿರುದ್ಧ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಸುಪ್ರೀಂ ಮೆಟ್ಟಿಲೇರಿದೆ.
ಹಿಂದಿನ ತೀರ್ಪಿನಲ್ಲಿ ಬಹುಪತ್ನಿತ್ವ ಹಾಗೂ ಇತರ ಪದ್ಧತಿ ವಿಚಾರವಾಗಿ ತಿರ್ಮಾನಿಸಲಾಗಿದ್ದು, ನಮ್ಮ ಸಮುದಾಯಕ್ಕೆ ಸೇರದ ವ್ಯಕ್ತಿಯೊಬ್ಬರು ಧಾರ್ಮಿಕ ಸಂಪ್ರದಾಯವನ್ನು ಪ್ರಶ್ನಿಸಿ ಸಾರ್ವಜನಿಕ ಅರ್ಜಿಯನ್ನು ಸಲ್ಲಿಸುವಂತಿಲ್ಲ ಎಂದು ಮುಸ್ಲಿಂ ಮಂಡಳಿ ಮೇಲ್ಮನವಿಯಲ್ಲಿ ತಿಳಿಸಿದೆ.
ಈಗಾಗಲೇ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆಯ ಬಗ್ಗೆ ಮುಸ್ಲಿಂ ಮಂಡಳಿ ಹಾಗೂ ಇತರ ಸಂಘಟನೆಗಳು ಕಾರ್ಯ ವಹಿಸುತ್ತಿವೆ. ಈಗ ಇಸ್ಲಾಂನ ಬಹುಪತ್ನಿತ್ವ ಹಾಗೂ ನಿಖಾ ಹಲಾಲ್ ನಿಷೇಧಿಸುವಂತೆ ಕೋರಿ ವಕೀಲ, ಬಿಜೆಪಿ ಮುಖಂಡ ಅಶ್ವಿನಿ ಕುಮಾರ್ ಅವರು ಅರ್ಜಿ ನೀಡಿದ್ದಾರೆ.
ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಒಂದಕ್ಕಿಂತ ಹೆಚ್ಚು ಪತ್ನಿಯನ್ನು ಹೊಂದಲು ಬಹುಪತ್ನಿತ್ವ ಪದ್ಧತಿಯು ಅವಕಾಶ ಮಾಡಿಕೊಡುತ್ತದೆ ಎಂದು ಮುಸ್ಲಿಂ ಮಂಡಳಿ ತಿಳಿಸಿದೆ..
ನಿಖಾ ಹಲಾಲ್ ಇಸ್ಲಾಂ ಅನುಸರಿಸುವ ಪದ್ಧತಿಯಾಗಿದ್ದು, ಒಬ್ಬ ಮುಸ್ಲಿಂ ಮಹಿಳೆ ಪತಿಯಿಂದ ತ್ರಿವಳಿ ತಲಾಖ್ ಪಡೆದ ಬಳಿಕ ಮತ್ತೆ ಗಂಡನ ಜೊತೆ ಮರುವಿವಾಹವಾಗುವ ಮೊದಲು ಆಕೆ ಮತ್ತೊಬ್ಬ ವ್ಯಕ್ತಿಯ ಜೊತೆ ವಿವಾಹವಾಗಿ ಆತನಿಗೆ ವಿಚ್ಛೇದನ ನೀಡಿದ ಬಳಿಕ ಮೊದಲ ಪತಿ ಜೊತೆ ವಿವಾಹವಾಗಬಹುದು.