ನವದೆಹಲಿ, ಜ 27 (Daijiworld News/MB) : ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಲ್ಲೇ ಇರುವ ಸಿನೆಮಾ ನಿರ್ದೇಶಕ ಅನುರಾಗ್ ಕಶ್ಯಪ್ ಈಗ ಟ್ವೀಟ್ ಮಾಡಿ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರಾಣಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿಕೊಂಡಿದ್ದಾರೆ.
ಕಶ್ಯಪ್ ತನ್ನ ಟ್ವೀಟ್ನಲ್ಲಿ ಗೃಹಸಚಿವರು ಎಷ್ಟು ಹೆದರು ಪುಕ್ಕಳರು. ತನಗೆ ಪೊಲೀಸ್, ಗೂಂಡಾಗಳು, ಸೇನೆಯನ್ನು ಹೆಚ್ಚಿಸುತ್ತಾರೆ. ಆದರೆ ನಿರಾಯುಧರಾದ ಪ್ರತಿಭಟನಾಕಾರರ ಮೇಲೆ ಆಕ್ರಮಣ ಮಾಡಿಸುತ್ತಾರೆ. ಅವರು ಕೀಳುಪಟ್ಟವನ್ನೂ ದಾಟಿದ್ದಾರೆ. ಇತಿಹಾಸವು ಈ ಪ್ರಾಣಿಗೆ ಉಗುಳುತ್ತದೆ ಎಂದು ಹೇಳಿದ್ದಾರೆ.
ಅಮಿತ್ ಶಾ ಅವರ ರ್ಯಾಲಿಯೊಂದರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ತಿಳಿದ ನಂತರ ಕಶ್ಯಪ್ ಅವರು ಈ ಟ್ವೀಟ್ ಮಾಡಿದ್ದಾರೆ.