ಕೊಚ್ಚಿ, ಜ 27 (Daijiworld News/MSP): ಸೈರೋ- ಮಲಬಾರ್ ಚರ್ಚ್ ಬಿಷಪ್ ಗಳ ಹೇಳಿಕೆ ಬಳಿಕ , ಈಗ ಕೇರಳದಲ್ಲಿ ಲವ್ ಜಿಹಾದ್ ಚರ್ಚೆ ಮುಂದುವರಿದಿದೆ. ಕೇರಳದಲ್ಲಿ ಲವ್ ಜಿಹಾದ್ ಎಂಬುವುದು ಆತಂಕಕಾರಿಯಾಗಿ ಬೆಳೆಯುತ್ತಿದೆ ಮತ್ತು ಇದು ಜಾತ್ಯತೀತತೆ ಮತ್ತು ಸಾಮಾಜಿಕ ಸಮಾನತೆಗೆ ಅಪಾಯ ತಂದೊಡ್ಡುತ್ತಿದೆ ಎಂದು ಸೈರೋ- ಮಲಬಾರ್ ಚರ್ಚ್ ಬಿಷಪ್ ಗಳು ಹೇಳಿಕೆ ನೀಡಿದ್ದರು.
ಲವ್ ಜಿಹಾದ್ ಎನ್ನುವುದು ಪ್ರಸ್ತುತ ನಡೆಯುತ್ತಿರುವ ವಿದ್ಯಮಾನವಾಗಿದೆ. ಆ ವಿಚಾರವಾಗಿ ನಿರ್ಲಕ್ಷ್ಯ ವಹಿಸಿದರೆ ಮೌನ ಸಮ್ಮತಿ ಕೊಟ್ಟಂತೆ ಎಂದು ಕೇರಳದ ಮತ್ತೊಮ್ಮೆ ಪಾದ್ರಿಯೊಬ್ಬರು ಹೇಳಿದ್ದಾರೆ.
ಲವ್ ಜಿಹಾದ್ ಮೂಲಕ ಕ್ರೈಸ್ತ ಯುವತಿಯರನ್ನು ಬಲೆಗೆ ಕೆಡವಿ ಅವರನ್ನು ಯುದ್ಧದಿಂದ ಜರ್ಜರಿತವಾದ ದೇಶಗಳಲ್ಲಿ ಲೈಂಗಿಕ ಗುಲಾಮರನ್ನಾಗಿ ಬಳಸಿಕೊಳ್ಳುತ್ತಿರುವುದು ಸತ್ಯ. ಇದರ ಬಗ್ಗೆ ನಿರ್ಲಕ್ಷ್ಯ ದೋರಣೆ ತಾಳಿದರೆ ಇದಕ್ಕೆ ಅನುಮತಿ ನೀಡಿದಂತೆಯೇ ಸರಿ ಎಂದು ಕ್ಯಾಥೋಲಿಕ್ ಚರ್ಚ್ ನ ಹಿರಿಯ ಧರ್ಮಗುರು ಫಾದರ್ ವರ್ಗೀಸ್ ವಲ್ಲಿಕಟ್ ಹೇಳಿದ್ದಾರೆ.
ಮಾತ್ರವಲ್ಲದೇ ಲವ್ ಜಿಹಾದ್ನಲ್ಲಿ ಸಿಲುಕಿ ನಾಪತ್ತೆಯಾದ ಕೇರಳ ಯುವತಿಯರ ಬಗ್ಗೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಪರಿಣಾಮಕಾರಿ ತನಿಖೆಯನ್ನು ನಡೆಸುತ್ತಿಲ್ಲ ಎಂದು ದೂರಿದ್ದಾರೆ.