ಮಾಲ್ಡಾ, ಜ 28 ( Daijiworld News/MB) : ಭಾರತದಲ್ಲಿ ಜಾತಿ ಭೇದ, ಲಿಂಗ ಭೇದ, ಕೋಮುವಾದವನ್ನು ಹೋಗಾಲಾಡಿಸಲು ಹೋರಾಟ ನಡೆಯುತ್ತಲ್ಲೇ ಇದೆ. ಇಂದಿಗೂ ಭಾರತದಲ್ಲಿ ಈ ಎಲ್ಲಾ ತಾರತಮ್ಯಗಳು ನಿರ್ಣಾಮವಾಗಿಲ್ಲ. ಈ ತಾರತಮ್ಯವನ್ನು ವಿರೋಧಿಸಿ ಶಿಕ್ಷಕರೊಬ್ಬರು ಹೋರಾಟ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಲದ ಮಾಲ್ಡಾ ಹಳ್ಳಿಯ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜೈದೇಬ್ ಲಾಹಿರಿ ಅವರು ತಮ್ಮ ಶಾಲೆಯಲ್ಲಿ ಈ ವರ್ಷದ ಶಾಲಾ ಸರಸ್ವತಿ ಪೂಜೆಯನ್ನು ಬುಡಗಟ್ಟು ಜನಾಂಗಕ್ಕೆ ಸೇರಿದ 11ನೇ ತರಗತಿ ವಿದ್ಯಾರ್ಥಿನಿಯಿಂದ ನಡೆಸಿಕೊಡಲು ಮುಂದಾಗಿದ್ದು ಈ ಹೋರಾಟದ ಹೆಜ್ಜೆ ಮುಂದಕ್ಕಿಟ್ಟಿದ್ದಾರೆ.
ವಿದ್ಯಾರ್ಥಿನಿ ರೋಹಿಲಾ ಹೆಂಬ್ರಾಮ್ ಪೂಜೆ ಕಾರ್ಯ ನಿರ್ವಹಿಸಲಿದ್ದು ಪೂಜೆಯ ಸಂದರ್ಭದಲ್ಲಿ ಆಕೆಗೆ ಬ್ರಾಹ್ಮಣೇತರ ಶಿಕ್ಷಕರಾದ ಬಿನಯ್ ಬಿಶ್ವಾಸ್ ಅವರು ನೆರವಾಗಲಿದ್ದಾರೆ.
ಈ ಹಿಂದೆ ಬ್ರಾಹ್ಮಣ ಅರ್ಚಕರೊಬ್ಬರು ಫುಜೆ ಮಾಡುತ್ತಿದ್ದು ಹಣಕ್ಕಾಗಿ ತಕರಾರು ಮಾಡಿದರು ಎಂಬ ಕಾರಣಕ್ಕೆ ಕೋಪಗೊಂಡ ಮುಖ್ಯ ಶಿಕ್ಷಕ ಜೈದೇಬ್ ಅವರು ತಾನೇ ಪೂಜೆ ಮಾಡಲು ಆರಂಭ ಮಾಡಿದ್ದರು. ಆ ಬಳಿಕ ಇತರ ಶಿಕ್ಷಕರು ಪೂಜೆ ಮಾಡಲು ಆರಂಭಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ವಿದ್ಯಾರ್ಥಿನಿಯಿಂದ ಅಂತಹ ಪೂಜೆ ನಡೆಯುತ್ತಿದೆ.
ಈ ಪ್ರದೇಶದಲ್ಲಿ ಬುಡಕಟ್ಟು ಜನಾಂಗವೇ ಜಾಸ್ತಿಯಾಗಿದ್ದು, ಈ ಶಾಲೆಯ ಆಸುಪಾಸು 10 ಕಿ.ಮೀ. ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ರದ್ದಾಗಿದೆ. ಅದಕ್ಕೆ ಮುಖ್ಯ ಕಾರಣವಾಗಿದ್ದಾರೆ ಈ ಶಿಕ್ಷಕ ಜೈದೇಬ್ ಲಾಹಿರಿ ಅವರು.