ಶ್ರೀನಗರ, ಜ 28 ( Daijiworld News/MB) : ಜಮ್ಮು ಕಾಶ್ಮೀರದ ಯುವಕನೋರ್ವ ಕೇವಲ 18 ದಿನಗಳ ಹಿಂದೆ ಭಯೋತ್ಪಾದನೆಗೆ ಸೇರಿದ್ದು ಸೋಮವಾರ ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದಾನೆ.
ಹತ್ಯೆಯಾದ ಉಗ್ರ ಜಮ್ಮು ಕಾಶ್ಮೀರದ ರೆದ್ವಾನಿ ಕುಲ್ಗಮ್ ನಿವಾಸಿಯಾಗಿದ್ದ 20ರ ಹರೆಯದ ಶಹೀದ್ ಖರ್ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ಹತ್ಯೆಯಾಗಿದ್ದಾನೆ.
ಶಹೀದ್ ಖರ್ ಇದೇ ತಿಂಗಳ 9ರಂದು ಮನೆಯಿಂದ ನಾಪತ್ತೆಯಾಗಿದ್ದು ಈಗ ಉಗ್ರನಾಗಿ ಹತನಾಗಿದ್ದಾನೆ.
ಸೋಮವಾರ ಅನಂತ್ ನಾಗ್ ಜಿಲ್ಲೆಯ ಅರ್ವಾನಿಯಲ್ಲಿ ಉಗ್ರರು ಗಸ್ತು ತಿರುಗುತ್ತಿದ್ದ ರಾಷ್ಟ್ರೀಯ ರೈಫಲ್ಸ್ ನ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು ಇದರಿಂದಾಗಿ ಓರ್ವ ಯೋಧ ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಕೂಡಲೇ ಯೋಧರು ಪ್ರತಿದಾಳಿ ನಡೆಸಿದ್ದಾರೆ. ತನನ್ನು ಶರಣಾಗುವಂತೆ ಸೂಚಿಸಿದ್ದು ಆದರೆ ಆತ ಶರಣಾಗದೆ ಎಕೆ-47 ರೈಫಲ್ ನಲ್ಲಿ ಯೋಧರತ್ತ ಗುಂಡು ಹಾರಿಸಿದ. ಇದಕ್ಕೆ ಪ್ರತಿದಾಳಿ ನಡೆಸಿದ ಸೇನೆ ಆತನನ್ನು ಹೊಡೆದುರುಳಿಸಿದೆ.