ದಾವಣಗೆರೆ, ಜ 28 (DaijiworldNews/SM): ಬಿಜೆಪಿ ಸರಕಾರದಲ್ಲಿ ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ರೇಣುಕಾಚಾರ್ಯ ಪಕ್ಷದಿಂದ ಸಚಿವ ಸ್ಥಾನ ಸಿಗಬೇಕೆನ್ನುವ ಆಕಾಂಕ್ಷಿಯಾಗಿದ್ದಾರೆ. "ನಾನು ಕಲ್ಲುಬಂಡೆ ಇದ್ದಂತೆ. ಯಾವತ್ತೂ ಕರಗಲ್ಲ. ಮಂತ್ರಿ ಸ್ಥಾನ ನೀರಿನ ಮೇಲೆ ಗುಳ್ಳೆ ಇದ್ದಂತೆ. ಈಗ ಎತ್ತಿನ ಬಂಡಿಯಲ್ಲಿ ಬಂದೆ, ಆ ಬಂಡಿ ಮುಂದೆ ಗೂಟದ ಕಾರು ಲೆಕ್ಕವೇ ಇಲ್ಲ" ಎಂದು ಶಾಸಕ ರೇಣುಕಾಚರ್ಯ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, "ನಾನು ಸಚಿವ ಸ್ಥಾನದ ಆಕಾಂಕ್ಷಿ ಅಂತ ಹೇಳಿದ್ದು ಸತ್ಯ. ಆದರೆ, ನನಗೆ ಗೂಟದ ಕಾರು ಅಗತ್ಯವಿಲ್ಲ. ಬದಲಾಗಿ ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗಿದೆ. ಅಧಿಕಾರ ಶಾಶ್ವತವಲ್ಲ. ಯಾರೇ ಟೀಕೆ ಮಾಡಿದರೂ ಪರವಾಗಿಲ್ಲ, ನಾನು ಬಂಡೆಯಿದ್ದಂತೆ ಎಂದು ಬಸವರಾಜ್ ಯತ್ನಾಳ್ ಗೆ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.
ಸಚಿವ ಸ್ಥಾನ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ರಾಜ್ಯದ ಸಿಎಂಗೆ ಪರಾಮಾಧಿಕಾರ ಇದೆ. ಅವರು ಹಾಗೂ ಕೇಂದ್ರದ ವರಿಷ್ಠರು ಸೇರಿ ಸಚಿವ ಸ್ಥಾನ ತೀರ್ಮಾನ ಮಾಡುತ್ತಾರೆ" ಎಂದರು.