ಬೆಂಗಳೂರು, ಜ.29 (Daijiworld News/PY): ಹಿಂದುಗಳೆಲ್ಲಾ ಒಂದೇ ಎಂದು ಘೋಷಣೆ ಕೂಗುವ ಸಂಘ ಪರಿವಾರದ ಬಂಧುತ್ವದ ವ್ಯಾಪ್ತಿಯಲ್ಲಿ ದಲಿತರಿಲ್ಲವೇ, ಎಲ್ಲರಿಗೂ ಸಲ್ಲುವ ಸರ್ಕಾರ ರಾಜ್ಯದಲ್ಲಿ ಇದೆಯೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉಡುಪಿ ಜಿಲ್ಲೆ ಕಾಪು ತಾಲೂಕಿನ ಉಚ್ಚಿಲದಲ್ಲಿ ದಲಿತ ಸಮುದಾಯಕ್ಕೆ ಮೃತ ದೇಹದ ಅಂತಿಮ ಸಂಸ್ಕಾರ ಮಾಡಲು ಹಿಂದೂ ಮೇಲ್ಜಾತಿಯವರು ಅವಕಾಶ ನೀಡದಿದ್ದ ಕಾರಣ ಕೊನೆಗೆ ದಲಿತರು ಶವವನ್ನು ಉಚ್ಚಿಲ ಗ್ರಾಮ ಪಂಚಾಯತ್ ಎದುರೇ ಸುಡಲು ತಯಾರಿ ನಡೆಸಿದ್ದರು.
ಈ ಘಟನೆಯ ಕುರಿತು ಬುಧವಾರ ಟ್ವೀಟ್ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಉಡುಪಿ ಜಿಲ್ಲೆ ಕಾಪುವಿನ ದಲಿತ ಸಮಾಜದ ಮುಖಂಡ ಶಂಕರ್ ಅವರ ಸಾವಿನ ನಂತರ ಅಂತ್ಯಕ್ರಿಯೆಗೆ ಹಿಂದೂ ಸ್ಮಶಾನದಲ್ಲಿ ಅವಕಾಶ ನೀಡದಿರುವ ಅಮಾನವೀಯ ವರ್ತನೆ ಖಂಡನೀಯ.
ಹಿಂದುಗಳೆಲ್ಲ ಒಂದು ಎಂದು ಘೋಷಣೆ ಕೂಗುತ್ತಿರುವ ಸಂಘ ಪರಿವಾರದ ಬಂದುತ್ವದ ವ್ಯಾಪ್ತಿಯಲ್ಲಿ ದಲಿತರು ಇಲ್ಲವೇ? ಎಲ್ಲರಿಗೂ ಸಲ್ಲುವ ಸರ್ಕಾರ ರಾಜ್ಯದಲ್ಲಿದೆಯೇ? ಎಂದು ಕೇಳಿದ್ದಾರೆ.