ಧಾರವಾಡ, ಜ.29 (Daijiworld News/PY) : "ಈ ಸರ್ಕಾರ ಹೀಗೆ ಇರಲಿ, ಸಚಿವ ಸಂಪುಟ ವಿಸ್ತರಣೆ ಆಗುವುದೇ ಬೇಡ ಎಂದು ಅನಿಸುತ್ತಿದೆ" ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, "ಮೂರು ವರ್ಷ ಸರ್ಕಾರ ಮಾಡಿದರೆ ಉತ್ತಮ. ಈ ಸರ್ಕಾರ ಹೀಗೆ ಇರಲಿ. ಸಚಿವ ಸಂಪುಟ ವಿಸ್ತರಣೆ ಆಗುವುದು ಬೇಡ ಎಂದು ಅನಿಸುತ್ತಿದೆ" ಎಂದು ಹೇಳಿದರು.
"ಸಂಪುಟ ವಿಸ್ತರಣೆ ಮಾಡುವುದು ಸರ್ಕಾರದ ಮುಖ್ಯ ಕರ್ತವ್ಯ. ಈಗ ಉಪಚುನಾವಣೆಯಲ್ಲಿ ಶಾಸಕರಾದವರಿಗೆ ಅವರವರಲ್ಲೇ ನೆಲೆ ಇಲ್ಲದಂತಾಗಿದೆ. ಅವರವರ ನಡುವೆ ಮೂಲ ಜನ, ವಲಸಿಗರು ಎಂದು ಚರ್ಚೆ ನಡೆಯುತ್ತಿದೆ. 34 ಜನ ಸಚಿವರು ಇರಬೇಕಾದಲ್ಲಿ, 11 ಜನ ಮಾತ್ರ ನಡೆಸುವುದು ಸರಿಯಾಗಿಲ್ಲ. ಅವರ ವೈಯುಕ್ತಿಕ ವಿಚಾರ ಏನೇ ಇರಲಿ. ಶೀಘ್ರವೇ ಸಂಪುಟ ವಿಸ್ತರಣೆ ಮಾಡಬೇಕು" ಎಂದು ತಿಳಿಸಿದರು.